ಯಾದಗಿರಿ: ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹೊತ್ತಲ್ಲಿ ಅನ್‍ಲಾಕ್ ಮಾಡಬಾರದು. ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡಬೇಕೆಂದು ಸುರಪುರ ಶಾಸಕ ರಾಜುಗೌಡ ಸಿಎಂ ಬಿಎಸ್‍ವೈಗೆ ಒತ್ತಾಯ ಮಾಡಿದ್ದಾರೆ.
Advertisement
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜುಗೌಡ, ಲಾಕ್‍ಡೌನ್‍ನಿಂದ ಬಡ ಜನರು ಕಷ್ಟದಲ್ಲಿದ್ದಾರೆ. ಬಡವರಿಗೆ ಆರ್ಥಿಕ ಸಹಾಯದ ಪ್ಯಾಕೇಜ್ ಘೋಷಣೆ ಮಾಡಿ ಸಿಎಂ ಅವರು ಲಾಕ್‍ಡೌನ್ ವಿಸ್ತರಣೆ ಮಾಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದರು. ಇದನ್ನೂ ಓದಿ:ಬೇರೆ ರಾಜ್ಯದಿಂದ ಬಂದ ಕಾರ್ಮಿಕರಿಗಾಗಿ ಸ್ವಂತ ಮನೆ ಬಿಟ್ಟುಕೊಡಲೂ ಸಿದ್ಧ: ಶಾಸಕ ರಾಜುಗೌಡ
Advertisement
Advertisement
ತಜ್ಞರ ವರದಿ ಆಧರಿಸಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡುವುದು ಒಳಿತು. ಲಾಕ್‍ಡೌನ್ ವಿಸ್ತರಣೆ ಮಾಡಿದರೆ ದಿನಸಿ ಸಾಮಾಗ್ರಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಬೇಕು, ಲಾಕ್‍ಡೌನ್ ವಿಸ್ತರಿಸದೆ ಇದ್ದರೆ ಬಹಳ ಕಷ್ಟವಾಗುತ್ತದೆ. ಯಡಿಯೂರಪ್ಪ ಅವರು ಸಮರ್ಥವಾಗಿ ಕೋವಿಡ್ ನಿರ್ವಹಣೆ ಮಾಡುತ್ತಿದ್ದು, ಬಿಎಸ್‍ವೈ ಬಿಟ್ಟು ಬೇರೆ ಯಾರೇ ಸಿಎಂ ಇಗಿದ್ದರು ಕೂಡ ಸರ್ಕಾರ ನಡೆಸಲು ಬಹಳ ಕಷ್ಟವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
Advertisement