ನವದೆಹಲಿ: ಕಾರ್ಖಾನೆಯಲ್ಲಿರುವ ಬಟ್ಟೆಗಳ ರಾಶಿಗೆ ಬೆಂಕಿ ಹತ್ತಿಕೊಂಡು ನಂತರ ಹತ್ತಿರದಲ್ಲಿದ್ದ 20ಕ್ಕೂ ಹೆಚ್ಚು ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿತಾಗಿ ಸುಟ್ಟು ಭಸ್ಮವಾಗಿರುವ ಘಟನೆ ನವದೆಹಲಿಯ ಹರಿಕೇಶ್ ನಗರ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ.
“We got a call at 2 a.m. about the fire. The fire has been categorised as a medium category fire. No casualties have been reported till now. The reason for the fire will be determined by the Delhi Police. 27 fire tenders are working on the spot,” says a fire officer pic.twitter.com/QnnfOAqPGa
— ANI (@ANI) February 7, 2021
Advertisement
ಕಾರ್ಖಾನೆಯೊಂದರಲ್ಲಿ ಇಂದು ಮುಂಜಾನೆ 2 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಸುತ್ತಮುತ್ತಲೂ ಇದ್ದ ಗುಡಿಸಲುಗಳಿಗೆ ಬೆಂಕಿ ಹರಡಿದೆ. 20ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಇಂದು ಮುಂಜಾನೆ ಈ ಅವಘಡ ಸಂಭವಿಸಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
Advertisement
Delhi: Fire broke out in Sanjay Colony, in Okhla Phase II area
Earlier visuals of the fire from the area https://t.co/QjaknqdADx pic.twitter.com/XpCs8Iy778
— ANI (@ANI) February 7, 2021
Advertisement
ಬಟ್ಟೆಗಳ ರಾಶಿಗೆ ಮೊದಲು ಬೆಂಕಿ ಹೊತ್ತಿಕೊಂಡಿದೆ ನಂತರ ಸುತ್ತಮುತ್ತಲೂ ಬೆಂಕಿ ಆವರಿಸಿಕೊಂಡಿದೆ. ಆ ಸ್ಥಳದ ಆಸುಪಾಸಿನಲ್ಲಿ 20ರಿಂದ 22 ಗುಡಿಸಲುಗಳನ್ನು ಹಾಕಿಕೊಂಡು ಕಾರ್ಮಿಕರು ವಾಸ ಮಾಡುತ್ತಿದ್ದರು. ಆ ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಜನರು ಹೊರಗೆ ಓಡಿ ಬಂದಿದ್ದಾರೆ. ಆ ಜಾಗದಲ್ಲಿ ನಿಂತಿದ್ದ ಟ್ರಕ್‍ಗೂ ಬೆಂಕಿ ಹೊತ್ತಿಕೊಂಡಿದ್ದು, ಟ್ರಕ್ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಪೊಲೀಸರು ಹೇಳಿದ್ದಾರೆ.
Advertisement
Delhi: Fire broke out in Sanjay Colony, in Okhla Phase II area
Earlier visuals of the fire from the area https://t.co/QjaknqdADx pic.twitter.com/XpCs8Iy778
— ANI (@ANI) February 7, 2021
ಬೆಂಕಿ ಗುಡಿಸಿಲಿಗೆ ತಾಗಿರುವ ಪರಿಣಾಮ 30ರಿಂದ 40 ಜನರು ಬೆಂಕಿಯಲ್ಲಿ ಸಿಲುಕಿದ್ದರು. ಅವರನ್ನು ರಕ್ಷಿಸಿ, ಹೊರಗೆ ಕರೆತರಲಾಗಿದೆ. 26ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯವನ್ನು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.