ರಾಂಚಿ: ಬಿಲ್ಲುಗಾರಿಕೆಯಲ್ಲಿ ಜ್ಯೂನಿಯರ್ ವಿಭಾಗದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದ ಜಾರ್ಖಂಡ್ ಕ್ರೀಡಾಪಟು ಈಗ ಬಜ್ಜಿ, ಬೋಂಡಾವನ್ನು ಮಾರಾಟ ಮಾಡಿ ಜೀವನವನ್ನು ನಡೆಸುತ್ತಿದ್ದಾರೆ.
23 ವರ್ಷದ ಮಮತಾ ರಾಂಚಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಇವರು ಕೊರೊನ ಕಾರಣದಿಂದ ಮನೆಗೆ ಬಂದಿದ್ದರು. ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಬಜ್ಜಿ-ಬೋಂಡಾ ಮಾರುತ್ತಿದ್ದಾರೆ.
2010ರಲ್ಲಿ ಜೂನಿಯರ್ ಹಾಗೂ 2014ರಲ್ಲಿ ಸಬ್ ಜೂನಿಯರ್ ಮಟ್ಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಲಾಕ್‍ಡೌನ್‍ನಿಂದದಾಗಿ ಇವರ ಜೀವನವೇ ಜರ್ಜರಿತವಾಗಿದೆ. ತರಬೇತಿ ನೀಡುವ ಅಕಾಡೆಮಿಯನ್ನು ಮುಚ್ಚಲಾಗಿತ್ತು. ಹೀಗಾಗಿ ಅವರು ತಮ್ಮ ಊರಿಗೆ ಹೋಗಿದ್ದರು. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವ ಕಾರಣ ಮತ್ತೆ ತರಬೇತಿಯನ್ನು ಪಡೆಯಲು ಹೋಗಲು ಸಾಧ್ಯವಾಗಲಿಲ್ಲ.
ನಾವು 7 ಮಂದಿ ಮಕ್ಕಳು ಇದ್ದೇವೆ. ನಾನು ದೊಡ್ಡವಳು, ಆರ್ಥಿಕ ತೊಂದರೆಯಿಂದಾಗಿ ನನ್ನ ತಮ್ಮಂದಿರು ಓದುವುದನ್ನು ಬಿಟ್ಟಿದ್ದಾರೆ. ನಮ್ಮ ತಂದೆಗೆ ಸಿಗುವ ಪೆನ್ಶನ್ ಕೂಡಾ ಇನ್ನಷ್ಟೇ ಆರಂಭವಾಗಬೇಕಿದೆ. ಹೀಗಾಗಿ ನಾವು ನಡೆಸುತ್ತಿರುವ ಬಜ್ಜಿ ಅಂಗಡಿಯ ಮೇಲೆ ನಮ್ಮ ಕುಟುಂಬ ಜೀವನವನ್ನು ಸಾಗಿಸುತ್ತಿದೆ ಎಂದು ಮಮತಾ ಅವರು ಹೇಳಿದ್ದಾರೆ.
ನಾನು ಬಜ್ಜಿ ಅಂಗಡಿ ನಡೆಸಲಿಲ್ಲ ಎಂದರೆ ನಮ್ಮ ಕುಟುಂಬ ಹಸಿವಿನಿಂದ ಕಂಗೆಡಬೇಕಾಗುತ್ತದೆ. ಸರ್ಕಾರ ನಮಗೆ ಎನಾದರೂ ಸಹಕಾರ ನೀಡಿದರೆ ನಮ್ಮ ಕುಟುಂಬಕ್ಕೆ ನೇರವಾಗುತ್ತದೆ. ಇಲ್ಲದಿದ್ದರೆ ರಾಷ್ಟ್ರಮಟ್ಟಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎನ್ನುವ ನನ್ನ ಕನಸು ಹಾಗೆಯೇ ಉಳಿದುಕೊಳ್ಳುತ್ತದೆ ಎಂದು ಕಣ್ಣೀರು ಹಾಕಿದ್ದಾರೆ.