ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆ ಬೆಡ್‍ಗಳ ಸಮಸ್ಯೆ ಎದುರಾಗಿದೆ. ಆಸ್ಪತ್ರೆಯಲ್ಲಿ ಕೇವಲ 115 ಬೆಡ್‍ಗಳಿದ್ದು, ಜಿಲ್ಲೆಯಲ್ಲಿ ಪ್ರತಿ ದಿನ 60-70 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಜನ ಆತಂಕದಲ್ಲೇ ಬದುಕುವಂತಾಗಿದೆ.
Advertisement
ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆ ತುಂಬಿ ತುಳುಕುತ್ತಿದೆ. ಹೀಗಾಗಿ ಬೆಡ್‍ಗಳ ಕೊರತೆ ಎದುರಾಗುತ್ತಿದೆ. ಹಾಲಿ 38 ಐಸಿಯು ಬೆಡ್ ಸೇರಿದಂತೆ ಆಸ್ಪತ್ರೆಯಲ್ಲಿ ಕೇವಲ 115 ಹಾಸಿಗೆ ಸಾಮಥ್ರ್ಯ ಇದೆ. ಆದರೆ ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರತಿ ದಿನ 60-70 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ತೀವ್ರ ರೋಗ ಲಕ್ಷಣಗಳು ಇರುವವರೆಗೆ ಬೆಡ್ ನೀಡಲು ವೈದ್ಯರು ಹೆಣಗಾಡುವಂತಾಗಿದೆ.
Advertisement
Advertisement
ಕೊರೊನಾ ಪೀಡಿತರಿಗೆ ಒಂದೆರಡು ದಿನ ಚಿಕಿತ್ಸೆ ನೀಡಿ ನಂತರ ಕೊರೊನಾ ಕೇರ್ ಸೆಂಟರ್‍ಗಳಿಗೆ ರವಾನೆ ಮಾಡಲಾಗುತ್ತಿದೆ. ಕೇರ್ ಸೆಂಟರ್‍ಗೆ ರವಾನಿಸಲ್ಡುತ್ತಿದ್ದಂತೆ ಖಾಲಿಯಾದ ಬೆಡ್‍ಗಳು ತಕ್ಷಣವೇ ಭರ್ತಿಯಾಗುತ್ತಿವೆ. ತೀವ ರೋಗ ಲಕ್ಷಣ ಇರುವ ರೋಗಿಗಳು ಹೆಚ್ಚಿನ ಸಂಖೆಯಲ್ಲಿ ಬಂದರೆ ಏನು ಮಾಡುವು ಎಂದು ವೈದ್ಯಾಧಿಕಾರಿಗಳಿಗೆ ದಿಕ್ಕು ತೋಚದಂತಾಗಿದೆ. ರೋಗ ಲಕ್ಷಣ ಕಂಡು ಬಂದ ತಕ್ಷಣ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆದುಕೊಳ್ಳಿ. ಗಂಭೀರ ಸ್ಥಿತಿಗೆ ತಲುಪಿದಲ್ಲಿ ಬೆಡ್ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.