ತುಮಕೂರು: ಕಳ್ಳತನದ ಆರೋಪದ ಮೇಲೆ ಬಂಧಿತನಾಗಿದ್ದ ಆರೋಪಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆದರೆ ತುಮಕೂರು ಜಿಲ್ಲಾ ಕಾರಾಗ್ರಹದ ಖೈದಿಗಳು ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ.
Advertisement
ಕಳ್ಳತನ ಪ್ರಕರಣದ 23 ವರ್ಷದ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲು ತಯಾರಿ ನಡೆಸಲಾಗುತ್ತಿತ್ತು. ಇದಕ್ಕೂ ಮುನ್ನ ಕೋವಿಡ್-19 ಟೆಸ್ಟ್ ಮಾಡಲಾಗಿದೆ. ಕೋವಿಡ್ ಟೆಸ್ಟ್ ನಲ್ಲಿ ಆರೋಪಿಗೆ ಪಾಸಿಟಿವ್ ಬಂದಿದ್ದು, ಆರೋಪಿಯನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಯ ಖೈದಿಗಳ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತಿದೆ.
Advertisement
ಪ್ರಕರಣದ ಹಿನ್ನೆಲೆ
ಸೋಂಕಿತ 23 ವರ್ಷದ ಆರೋಪಿ ಈ ಹಿಂದೆ ಅಪರಾಧ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ. ಜೂನ್ 19 ರಂದು ಜಾಮೀನು ಮೂಲಕ ಬಿಡುಗಡೆಗೊಂಡಿದ್ದ. ಜೂನ್ 19 ರಿಂದ 28 ರವರೆಗೂ ಈತ ಪಾವಗಡ ತಾಲೂಕು ಹಾಗೂ ಬೆಂಗಳೂರಿನಲ್ಲಿ ಓಡಾಡಿಕೊಂಡಿದ್ದ. ಈ ಮಧ್ಯೆ ಇನ್ನೊಂದು ಪ್ರಕರಣದಲ್ಲಿ ಜೂನ್ 28 ರಂದು ಪೊಲೀಸರು ಈತನನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸುವ ಮುನ್ನ ಕೋವಿಡ್-19 ಟೆಸ್ಟ್ ಮಾಡಿದಾಗ ಸೋಂಕು ದೃಢಪಟ್ಟಿದೆ. ಹೀಗಾಗಿ ಜಿಲ್ಲಾಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿದೆ.
Advertisement
Advertisement
ಒಂದು ವೇಳೆ ಕೋವಿಡ್-19 ಟೆಸ್ಟ್ ಮಾಡಿಸದೇ ಆರೋಪಿಯನ್ನು ಜೈಲಿಗೆ ಕಳುಹಿಸಿದ್ದರೆ ಇತರ ಖೈದಿಗಳಿಗೂ ಸೋಂಕು ಹರಡುವ ಸಾಧ್ಯತೆ ಇತ್ತು. ಸದ್ಯ ತುಮಕೂರು ಜಿಲ್ಲಾ ಕಾರಾಗೃಹದ ಖೈದಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.