ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ಮಾಜಿ ಸಚಿವ ರೋಷನ್ ಬೇಗ್ ಜಾರಿ ನಿರ್ದೇಶನಾಲಯದ ಬಂಧನದ ಭೀತಿಯಲ್ಲಿದ್ದಾರೆ. ಇಂದು ಬೆಳಗ್ಗೆ ಇಬ್ಬರ ನಿವಾಸಗಳ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಡತಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ.
Advertisement
ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿಯಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿದ್ದರು. 2.5 ಕೋಟಿ ಬೆಲೆ ಬಾಳುವ ಆಸ್ತಿಯನ್ನು 5 ಕೋಟಿ ರೂ.ಗೆ ಮಾರಿದ್ದರು. ಇದೇ ನಿವೇಶನ ಜಮೀರ್ ಅಹ್ಮದ್ ಅವರಿಗೆ ಕಂಟಕವಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಈ ಸಂಬಂಧ ಎಸ್‍ಐಟಿ ಮತ್ತು ಸಿಬಿಐ ವಿಚಾರಣೆಗೂ ಜಮೀರ್ ಅಹ್ಮದ್ ಹಾಜರಾಗಿದ್ದರು. ಇದನ್ನೂ ಓದಿ: ಐಎಂಎ ದೋಖಾಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್-ಮನ್ಸೂರ್ ಖಾನ್ ಜೊತೆಗೆ ಸಚಿವ ಜಮೀರ್ ಗೂ ನಂಟು?
Advertisement
Advertisement
ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಬಳಿಯಲ್ಲಿರುವ ನೂತನ ಬಂಗಲೆ, ಯುಬಿಸಿಟಿಯಲ್ಲಿರು ಫ್ಲ್ಯಾಟ್, ಕಲಾಸಿಪಾಳ್ಯದಲ್ಲಿಯ ನ್ಯಾಷನಲ್ ಟ್ರಾವೆಲ್ ಕಚೇರಿ ಮತ್ತು ದೆಹಲಿ, ಮುಂಬೈನಲ್ಲಿರುವ ಕಚೇರಿಗಳ ಮೇಲೆ ಐಟಿ ದಾಳಿ ನಡೆದಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇತ್ತ ಜಮೀರ್ ಅಹ್ಮದ್ ನಿವಾಸದ ದಾಳಿಯ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯಾಹ್ನ 12 ಗಂಟೆಗೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಇದನ್ನೂ ಓದಿ: ಐಎಂಎ ಬಹುಕೋಟಿ ವಂಚನೆ ಪ್ರಕರಣ – ಮಾಜಿ ಸಚಿವ ಜಮೀರ್ ಗೆ ಭರ್ತಿ 10 ಗಂಟೆ ಡ್ರಿಲ್