-ರಾಹುಲ್ ಪರಿಚಯವಿತ್ತಾ ಸಂಬರಗಿಗೆ?
-ಫೋಟೋ ವೈರಲ್ ಬಳಿಕ ಸಂಬರಗಿ ಸ್ಪಷ್ಟನೆ
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಆಪ್ತ ಎನ್ನಲಾದ ರಾಹುಲ್ ಪರಿಚಯ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಅವರಿಗೆ ಮೊದಲೇ ಇತ್ತ ಅನುಮಾನವೊಂದು ಹುಟ್ಟಿಕೊಂಡಿದೆ. ರಾಹುಲ್ ಜೊತೆ ಪ್ರಶಾಂತ್ ಸಂಬರಗಿ ಕ್ಲಿಕ್ಕಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ.
ಸ್ಯಾಂಡಲ್‍ವುಡ್ ನಲ್ಲಿರುವ ಡ್ರಗ್ಸ್ ಮಾಫಿಯಾ ನಿರ್ಮೂಲನೆ ಆಗಬೇಕೆಂದು ಪ್ರಶಾಂತ್ ಸಂಬರಗಿ ಹೇಳುತ್ತಿದ್ದು, ನಟ ಸಂಜನಾ ಗಲ್ರಾನಿ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದರು. ಇದೀಗ ಸಂಜನಾ ಆಪ್ತನ ಜೊತೆ ಫೋಟೋ ರಿವೀಲ್ ಆಗಿದೆ.
ಫೋಟೋ ರಿವೀಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಪ್ರಶಾಂತ್ ಸಂಬರಗಿ, 2017ರಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಇದಾಗಿದ್ದು, ಆತನಿಗೂ ಮತ್ತು ನನಗೂ ಯಾವುದೇ ಸಂಪರ್ಕವಿಲ್ಲ. ಅಂದು ಯುಬಿ ಸಿಟಿಯಲ್ಲಿ ನಡೆದ ಪಾರ್ಟಿಗೆ ಬಹುತೇಕ ಗಣ್ಯರು ಆಗಮಿಸಿದ್ದರು. ಪಾರ್ಟಿಯಲ್ಲಿ ಫೋಟೋ ತೆಗೆದುಕೊಳ್ಳಲಾಗಿತ್ತು. ಈ ವಿಚಾರದಲ್ಲಿ ಪೊಲೀಸರು ಸಮನ್ಸ್ ನೀಡಿದ್ರೆ ನಾನು ವಿಚಾರಣೆಗೆ ಸಿದ್ಧ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.