– ಅನುಚಿತ ವರ್ತನೆ ವಿರುದ್ಧ ದೂರು ದಾಖಲು
ಚಾಮರಾಜನಗರ: ಜಿಲ್ಲೆಯ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಸಾರ್ವಜಕರಿಗೆ ಮುಕ್ತಗೊಳಿಸಿ, ಸಫಾರಿ ಪ್ರಾರಂಭಿಸಿದ ಮೊದಲ ದಿನವೇ ಮೂವರು ಪೋರ್ಚುಗಲ್ ಪ್ರಜೆಗಳು ಅಕ್ರಮವಾಗಿ ಪ್ರವೇಶಿಸಿರುವುದಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ತೋರಿದ್ದು, ಪ್ರಕರಣ ದಾಖಲಾಗಿದೆ.
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಲಯದಲ್ಲಿ ಘಟನೆ ನಡೆದಿದೆ. ಪೋರ್ಚುಗಲ್ ಪ್ರಜೆಗಳಾದ ರಿಕಾರ್ಡೊ, ಮಿಗ್ವೆಲ್ ಗ್ಯಾರಿಡೋ, ಥಾಮಸ್ ಪಿನ್ಹೋ ಅವರು ಸಫಾರಿ ವಲಯಕ್ಕೆ ಬೈಕ್ ಮೂಲಕ ಅಕ್ರಮವಾಗಿ ಪ್ರವೇಶಿಸಿದ್ದಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ತೋರಿದ್ದಾರೆ ಎನ್ನಲಾಗಿದೆ.
Advertisement
Advertisement
ಈ ಮೂವರೂ ಡಿಆರ್‍ಡಿಒಗೆ ಬಂದಿರುವ ವಿಶೇಷ ಎಂಜಿನಿಯರ್‍ಗಳೆಂದು ತಿಳಿದು ಬಂದಿದೆ. ವಿದೇಶಿ ಪ್ರಜೆಗಳ ಕಾಯ್ದೆ ಅಡಿ ಮೂವರ ವಿರುದ್ಧ ಪ್ರಕರಣ ದಾಖಲಿಸಿ, ಗುಂಡ್ಲುಪೇಟೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಅಲ್ಲದೆ ಅರಣ್ಯ ಇಲಾಖೆ ವಿರುದ್ಧ ಈ ಮೂವರೂ ರಾಯಭಾರ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಮೂವರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದ್ದು, ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.