– ದಾಖಲೆ ಬೆಲೆಗೆ ಒಣ ಮೆಣಸಿನಕಾಯಿ ಮಾರಾಟ
ಹಾವೇರಿ: ವಿಶ್ವ ಪ್ರಸಿದ್ಧ ಬ್ಯಾಡಗಿ ಒಣ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದಾಖಲೆಯ ಬೆಲೆಗೆ ಮಾರಾಟವಾಗಿದ್ದು, ಗದಗ ಜಿಲ್ಲೆಯ ರೈತನ ಒಂದು ಕ್ವಿಂಟಲ್ ಮೆಣಸಿನಕಾಯಿ ಬರೋಬ್ಬರಿ 50,111 ರೂ.ಗೆ ಮಾರಾಟವಾಗಿದೆ. ಇದು ಸರ್ವಕಾಲಿಕ ದಾಖಲೆ ಆಗಿದೆ. ಈ ಹಿನ್ನಲೆ ರೈತನಿಗೆ ಸಂತಸವಾಗಿದೆ.
ಗದಗ ಜಿಲ್ಲೆಯ ಬೆಟಗೇರಿ ನಿವಾಸಿ ಮಲ್ಲಿಕಾರ್ಜುನ ಅವರ ಒಣ ಮೆಣಸಿನಕಾಯಿ ಇಷ್ಟೊಂದು ಬೆಲೆಗೆ ಮಾರಾಟವಾಗಿ ಐತಿಹಾಸಿಕ ದಾಖಲೆ ಬರೆದಿದೆ. ಕಳೆದ ವಾರ ಬ್ಯಾಡಗಿ ಎಪಿಎಂಸಿಯಲ್ಲಿ ಸವಡಿ ರೈತರ ಮೆಣಸಿನಕಾಯಿ 40,111ರೂ. ಗೆ ಮಾರಾಟವಾಗಿ ದಾಖಲೆಯಾಗಿತ್ತು.
ಈಗ ಬ್ಯಾಡಗಿ ಎಪಿಎಂಸಿಯಲ್ಲಿ ಗದಗ ರೈತರೊಬ್ಬರ ಮೆಣಸಿನಕಾಯಿ 50,111 ರೂ.ಗೆ ಮಾರಾಟವಾಗಿದೆ. ಇನ್ನು ಮಲ್ಲಿಕಾರ್ಜುನ ಅವರು ಸುಮಾರು ಮೂರು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ. ಸದ್ಯ ಮೊದಲನೆ ಕಟಾವ್ ನಲ್ಲಿ 10 ಚೀಲ ಮಾರಾಟಕ್ಕೆ ಕೊಂಡೊಯ್ದಿದ್ದು, ಅದರಲ್ಲಿ ಮೂರು ಚೀಲ 50 ಸಾವಿರ ರೂ.ಗೆ ಮಾರಾಟವಾಗಿವೆ. ವಾರದಿಂದ ವಾರಕ್ಕೆ ಹೆಚ್ಚಿನ ದರದಲ್ಲಿ ಮಾರಾಟವಾಗಿದ್ದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.