ಹಾಸನ: ನಿಯಮಮೀರಿ ಹಾಕಿಸಿದ್ದ ಫ್ಲೆಕ್ಸ್ ತೆರವುಗೊಳಿಸಿದ ಅರಸೀಕೆರೆ ನಗರಸಭೆ ಆಯುಕ್ತರ ವಿರುದ್ಧ ಮುಖ್ಯಮಂತ್ರಿ ಬಿಎಸ್‍ವೈ ಆಪ್ತ ಸಂತೋಷ್ ಬೆಂಬಲಿಗರು ಏಕವಚನದಲ್ಲಿ ನಿಂದಿಸಿದ ಘಟನೆ ನಡೆದಿದೆ.
ಅರಸೀಕೆರೆ ನಗರಸಭೆ ವ್ಯಾಪ್ತಿಯ ಹಲವೆಡೆ ಎನ್.ಆರ್.ಸಂತೋಷ್‍ಗೆ ಶುಭಾಷಯ ಕೋರಿ ಫ್ಲೆಕ್ಸ್ ಹಾಕಲಾಗಿತ್ತು. ನಿಯಮ ಮೀರಿ ಫ್ಲೆಕ್ಸ್ ಹಾಕಿಸಿದ್ದಾರು. ಅರಸೀಕೆರೆ ನಗರಸಭೆ ಆಯುಕ್ತ ಕಾಂತರಾಜು, ತಡರಾತ್ರಿ ಫ್ಲೆಕ್ಸ್ ತೆರವುಗೊಳಿಸಲು ಮುಂದಾದರು. ಈ ವೇಳೆ ಸ್ಥಳಕ್ಕಾಗಮಿಸಿದ ಸಂತೋಷ್ ಬೆಂಬಲಿಗರು ಫ್ಲೆಕ್ಸ್ ತೆರವುಗೊಳಿಸಿ ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಅಡ್ಡಗಟ್ಟಿದ್ದಲ್ಲದೆ ನಗರಸಭೆ ಅಧಿಕಾರಿಗಳನ್ನು ಏಕವಚನದಲ್ಲಿ ನಿಂದಿಸಿದ್ದಾರೆ.
ಬೇರೆಯವರು ಫ್ಲೆಕ್ಸ್ ಹಾಕಿದ್ರೆ ಕೇಳಲ್ಲ. ನಾವು ಹಾಕಿಸಿದ್ರೆ ತೆಗೆಸ್ತೀಯಾ? ಈ ಟ್ರ್ಯಾಕ್ಟರ್ ಮುಂದೆ ಹೋಗಲು ಬಿಡಲ್ಲ ಎಂದು ಗಲಾಟೆ ಮಾಡಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಸ್ಥಳದಲ್ಲಿದ್ದ ಪೊಲೀಸರು ಮಾತ್ರ ಮೂಕ ಪ್ರೇಕ್ಷಕರಂತೆ ನಿಂತಿದ್ದಾರೆ. ಈ ಗಲಾಟೆಯೆಲ್ಲ ಗಮನಿಸಿದ ಸಾರ್ವಜನಿಕರು ಮಾತ್ರ ಆಡಳಿ ಪಕ್ಷದದ ಬೆಂಬಲಿಗರು ಏನೂ ಮಾಡಿದ್ರು ಅಧಿಕಾರಿಗಳು ಕೇಳಬಾರದ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ತಡರಾತ್ರಿ ಆರಂಭವಾದ ಫ್ಲೆಕ್ಸ್ ಜಟಾಪಟಿ ಇನ್ನೂ ಕೂಡ ಮುಂದುವರಿದಿದೆ.