ಹೈದರಾಬಾದ್: ಟಾಲಿವುಡ್ ನಟ ಮೆಗಾ ಪ್ರಿನ್ಸ್ ರಾಮ್‍ಚರಣ್ ತೇಜ ಹಾಗೂ ಜ್ಯೂನಿಯರ್ ಎನ್‍ಟಿಆರ್ ಒಟ್ಟಿಗೆ ಅಭಿನಯಿಸಿರುವ ಬಹುನಿರೀಕ್ಷಿತ ‘ಆರ್‌ಆರ್‌ಆರ್’ ಸಿನಿಮಾದ ಮೊದಲ ಮ್ಯೂಸಿಕ್ ವೀಡಿಯೋ ಭಾನುವಾರ ರಿಲೀಸ್ ಆಗಿದೆ.
ನಿರ್ದೇಶಕ ರಾಜಮೌಳಿಯವರು ಭರವಸೆ ನೀಡಿದಂತೆ ‘ಆರ್‌ಆರ್‌ಆರ್’ ದೋಸ್ತಿ ಎಂಬ ಟೈಟಲ್‍ನ ಮ್ಯೂಸಿಕಲ್ ವೀಡಿಯೋವನ್ನು ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಿದ್ದಾರೆ. ವಿಶೇಷವೆಂದರೆ ಎಂ.ಎಂ ಕೀರವಾಣಿ ಸಂಯೋಜಿಸಿರುವ ಈ ಹಾಡನ್ನು ಅನಿರುದ್ಧ್ ರವಿಚಂದ್ರ, ವಿಜಯ್ ಯೇಸುದಾಸ್, ಅಮಿತ್ ತ್ರಿವೇದಿ, ಹೇಮಚಂದ್ರ ಮತ್ತು ಯಾಜಿನ್ ನಿಜಾರ್ ಹಾಡಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ‘ಆರ್‌ಆರ್‌ಆರ್’ ಸಿನಿಮಾದ ನಿರ್ಮಾಪಕರು ಫ್ರೆಂಡ್‍ಶಿಪ್ ಡೇ ದಿನ ಆಗಸ್ಟ್ 1ರಂದು ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದರು. ಇದೀಗ ಬಿಡುಗಡೆಗೊಂಡಿರುವ ದೋಸ್ತಿ ಹಾಡಿನಲ್ಲಿ ಐವರು ಗಾಯಕರೊಂದಿಗೆ ಕೊನೆಯಲ್ಲಿ ರಾಮ್‍ಚರಣ್ ಹಾಗೂ ಜ್ಯೂನಿಯರ್ ಎನ್‍ಟಿಆರ್ ಕೂಡ ಸೂಟ್‍ನಲ್ಲಿ ಮಿಂಚಿದ್ದಾರೆ.
ಸದ್ಯ ಈ ಹಾಡನ್ನು ರಾಜಮೌಳಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಸ್ನೇಹಿತರ ದಿನಾಚರಣೆಯಂದು ರಾಮರಾಜು ಹಾಗೂ ಭೀಮ ಎಂಬ ಇಬ್ಬರು ಪ್ರಬಲ ವ್ಯಕ್ತಿಗಳು ಎದುರಾಳಿಗಳಾಗಿ ಬರುತ್ತಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
ರಾಮಚರಣ್ ಹಾಗೂ ಜ್ಯೂನಿಯರ್ ಎನ್‍ಟಿಆರ್ ಇದೇ ಮೊದಲ ಬಾರಿಗೆ ‘ಆರ್‌ಆರ್‌ಆರ್’ ಸಿನಿಮಾದ ಮೂಲಕ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದು, ಈ ಚಿತ್ರಕ್ಕೆ ನಿರ್ದೇಶಕ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಈ ಚಿತ್ರದಲ್ಲಿ ರಾಮ್‍ಗೆ ಜೋಡಿಯಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಖರೀದಿಸಿದೆ. ಇದನ್ನೂ ಓದಿ:ಮಮ್ಮಿ ಆಗ್ತಿದ್ದಾರಾ ಪದ್ಮಾವತಿ – ಆಸ್ಪತ್ರೆಗೆ ಬಂದ ದೀಪ್‍ವೀರ್
This Friendship day, witness the coming together of 2 powerful opposing forces – Ramaraju????& Bheem ????#Dosti Music Video: https://t.co/uK5ltoe7Fq@MMKeeravaani@itsvedhem @anirudhofficial @ItsAmitTrivedi @IAMVIJAYYESUDAS #YazinNizar@TSeries @LahariMusic #RRRMovie #Natpu #Priyam
— rajamouli ss (@ssrajamouli) August 1, 2021