ಮಂಗಳೂರು: ಕೊರೊನಾದ ಸಂಕಷ್ಟ ಕಾಲದಲ್ಲಿ ಎಲ್ಲೆಡೆ ವಿವಿಧ ರೀತಿಯ ಸೇವಾ ಕಾರ್ಯಗಳು ನಡೆಯುತ್ತಿದ್ದು, ಅದರಂತೆ ಮಂಗಳೂರಿನ ಸಮಾಜ ಸೇವಾ ಯುವ ಸಂಘಟನೆ ‘ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ’ ಇದರ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಜನ್ಮದಿನಾಚರಣೆಯ ಅಂಗವಾಗಿ ಉಚಿತ ಅಂಬುಲೆನ್ಸ್ ನ್ನು ಇಂದು ಲೋಕಾರ್ಪಣೆ ಮಾಡಲಾಯಿತು.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಮುಂಭಾಗದಲ್ಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಂಬುಲೆನ್ಸ್ ಗೆ ಚಾಲನೆ ನೀಡಿದರು. ಕೊರೊನಾದ ಈ ಸಂಕಷ್ಟದ ಕಾಲದಲ್ಲಿ ಸಾರ್ವಜನಿಕರಿಗೆ ತುರ್ತು ಉಪಯೋಗದ ನಿಟ್ಟಿನಲ್ಲಿ ಉಚಿತ, ಸುಸಜ್ಜಿತ, ಆಕ್ಸಿಜನ್ ಒಳಗೊಂಡ ಹೈಟೆಕ್ ಅಂಬುಲೆನ್ಸ್ ಸೇವೆ ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರದ ಶಾಸಕ ಡಾ.ವೈ.ಭರತ್ ಶೆಟ್ಟಿ, ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ) ಸ್ಥಾಪಕ ಅಧ್ಯಕ್ಷರಾದ ಉದಯ್ ಪೂಜಾರಿ, ರಾಜ್ಯ ಕಿಯೋನಿಕ್ಸ್ ನ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಕುದ್ರೋಳಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್ ಸಾಯಿರಾಮ್, ಮೂಡ ಅಧ್ಯಕ್ಷ ರವಿಶಂಕರ್ ಮಿಜಾರ್, ಕೆ.ಟಿ.ಸುವರ್ಣ, ಜಗದೀಪ್ ಸುವರ್ಣ, ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ) ಸದಸ್ಯರು ಹಾಜರಿದ್ದರು.