ಬೆಂಗಳೂರು: ನಗರದಲ್ಲಿ ಸಾರ್ವಜನಿಕರಿಗೆ ಉಚಿತ ಕೊರೊನಾ ಲಸಿಕೆ ಕಲ್ಪಿಸಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್, ಲಸಿಕೆ ವ್ಯವಸ್ಥೆ ನಾನು ಮಾಡಿರೋದು ಎಂಪಿ ಫೋಟೋ ಹಾಕಿದ್ದರಲ್ಲೋ. ನನ್ನ ಫೋಟೋ ಬ್ಯಾನರ್ ನಲ್ಲಿ ಹಾಕಬೇಕಿತ್ತು ಎಂದು ಕಾರ್ಯಕರ್ತರ ಮೇಲೆ ಗರಂ ಆಗಿದ್ದಾರೆ.
ಫ್ರೀ ವ್ಯಾಕ್ಸಿನ್‍ಗೆ ಚಾಮರಾಜಪೇಟೆಯಲ್ಲಿ ಜಮೀರ್ ಅವರು ವ್ಯವಸ್ಥೆ ಮಾಡಿದ್ದರು. ಬಳಿಕ ಇಂದು ವ್ಯಾಕ್ಸಿನೇಷನ್ ವ್ಯವಸ್ಥೆ ನೋಡಲು ತೆರಳಿದ ವೇಳೆ ವಾಕ್ಸಿನ್ ಸೆಂಟರ್ ನಲ್ಲಿ ಅಳವಡಿಸಿದ್ದ ಬ್ಯಾನರ್ ನಲ್ಲಿ ಕ್ಷೇತ್ರದ ಎಂಪಿ ಪಿ.ಸಿ ಮೋಹನ್ ಅವರ ಫೋಟೋ ಹಾಕಲಾಗಿತ್ತು. ಇದನ್ನು ಕಂಡ ಜಮೀರ್, ಉಚಿತ ಲಸಿಕೆ ವ್ಯವಸ್ಥೆ ಮಾಡಿರುವುದು ನಾನು ಆದರೆ ಬ್ಯಾನರ್‍ನಲ್ಲಿ ಎಂಪಿ ಫೋಟೋ ಹಾಕಿದ್ದೀರಿ. ಎಂಪಿ ಫೋಟೋನೂ ಹಾಕಿ ಬೇಡ ಅಂತ ಹೇಳಲ್ಲ. ನನ್ನ ಫೋಟೋನು ಹಾಕಬೇಕು ಅಲ್ವಾ ಎಂದು ಕಾರ್ಯಕರ್ತರಿಗೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಜಮೀರ್ ಅಹ್ಮದ್‍ಗೆ ಸಿಹಿಮುತ್ತು ನೀಡಿ ಸಂಭ್ರಮಿಸಿದ ಅಭಿಮಾನಿ
ನಾನು ಮೂರು ದಿನದಿಂದ ಕಷ್ಟ ಪಟ್ಟು ಕೆಲಸ ಮಾಡಿ ವ್ಯವಸ್ಥೆ ಮಾಡಿದ್ದೀನಿ. ನೀನು ಎಂಪಿ ಫೋಟೋ ಹಾಕಿ ಸುಮ್ಮನಾಗಿದ್ದೀಯಲ್ಲ ಇದು ತಪ್ಪು ಅಲ್ವಾ ಎಂದು ಕಾರ್ಯಕರ್ತರಿಗೆ ಪ್ರಶ್ನಿಸಿ, ನನ್ನ ಫೋಟೋ ಹಾಕಬೇಕಿತ್ತು. ನಾನು ವ್ಯಾಕ್ಸಿನ್ ವ್ಯವಸ್ಥೆ ಮಾಡಿದ್ದು ನೀವು ಎಂ.ಪಿ ಫೋಟೋ ಮಾತ್ರ ಹಾಕಿದ್ದು ತಪ್ಪು ಎಂದು ಗರಂ ಆದರು. ಬಳಿಕ ಲಸಿಕೆ ಪಡೆಯಲು ಬಂದ ಸಾರ್ವಜನಿಕರೊಂದಿಗೆ ಆದಷ್ಟು ಬೇಗ ಲಸಿಕೆ ಪಡೆಯಿರಿ. ನನಗೆ ನಮ್ಮ ಚಾಮರಾಜಪೇಟೆಯ ಎಲ್ಲಾ ಜನತೆ ಲಸಿಕೆ ಪಡೆಯಬೇಕೆಂಬ ನಿರ್ಧಾರವಿದೆ ಹಾಗಾಗಿ ಈ ವ್ಯವಸ್ಥೆ ಕಲ್ಪಿಸಿದ್ದೇನೆ ಎಂದರು.