ಸೈಂಟ್ ಲೂಸಿಯಾ: ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವಿನ 5ನೇ ಟಿ20 ಪಂದ್ಯದಲ್ಲಿ ವಿಂಡೀಸ್ ತಂಡದ ಆಲ್‍ರೌಂಡರ್ ಫ್ಯಾಬಿಯನ್ ಅಲೆನ್ ಅದ್ಭುತವಾದ ಒಂದು ಕ್ಯಾಚ್ ಹಿಡಿಯುವ ಮೂಲಕ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಅವರಿಗೆ ಪಂಚ್ ನೀಡಿ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ.
ವಿಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಆರೋನ್ ಫಿಂಚ್, ಹೇಡನ್ ವಾಲ್ಷ್ ಹಾಕಿದ ಲೋ ಫುಲ್‍ಟಾಸ್ ಎಸೆತವನ್ನು ಲಾಂಗ್ ಆನ್ ಮೇಲೆ ಬಾರಿಸಲು ಯತ್ನಿಸಿದರು. ಈ ವೇಳೆ ಲಾಂಗ್ ಆನ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಲೆನ್ ಓಡಿ ಬಂದು ಡೈವ್ ಹೊಡೆದು ಅದ್ಭುತ ಕ್ಯಾಚ್ ಮೂಲಕ ಫಿಂಚ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಈ ಕ್ಯಾಚ್ ಕಂಡ ಅಭಿಮಾನಿಗಳು ಮತ್ತು ಸ್ವತಃ ಫಿಂಚ್ ಕೂಡ ಒಂದು ಕ್ಷಣ ದಂಗಾದರು.
ಈ ಪಂದ್ಯದಲ್ಲಿ ವಿಂಡೀಸ್ 16 ರನ್‍ಗಳಿಂದ ಗೆದ್ದು ಐದು ಪಂದ್ಯಗಳ ಟಿ20 ಸರಣಿಯನ್ನು ಗೆದ್ದು 4-1ರಿಂದ ಗೆದ್ದು ಬೀಗಿದೆ.
ಐದನೇ ಪಂದ್ಯದಲ್ಲಿ ಫ್ಯಾಬಿಯನ್ ಅಲೆನ್ ಹಿಡಿದ ಕ್ಯಾಚ್ ಬಳಿಕ ಸ್ವತಃ ಅವರೇ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಇದು ಹಕ್ಕಿಯಲ್ಲ, ವಿಮಾನವಲ್ಲ, ಸೂಪರ್ ಮ್ಯಾನ್ ಕೂಡ ಅಲ್ಲ ನಿಮ್ಮ ಹುಡುಗ ಫ್ಯಾಬಿಯನ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಒಂದೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ
View this post on Instagram
ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ಪರ ಫ್ಯಾಬಿಯನ್ ಅಲೆನ್ ಉತ್ತಮ ಪ್ರದರ್ಶನ ತೋರಿದ್ದು, ಈ ಮೂಲಕ ಮುಂದಿನ ಟಿ20 ವಿಶ್ವಕಪ್‍ಗೆ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ಹೊಂದಿದ್ದಾರೆ.