ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ಜಾಮೀನು ಅರ್ಜಿಯನ್ನು ಮುಂಬೈ ಕೋರ್ಟ್ ವಜಾಗೊಳಿಸಿದ್ದು, ಹೀಗಾಗಿ ಆಕೆಗೆ ಜೈಲೇ ಗತಿಯಾಗಿದೆ.
ರಿಯಾ ಇರುವ ಬೈಕುಲ್ಲಾ ಜೈಲಿನಲ್ಲಿ ಫ್ಯಾನ್ ಇಲ್ಲ, ಬೆಡ್ ಕೂಡ ಇಲ್ಲ. ಮಗಳು ಶೀನಾ ಬೋರಾ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸ ಅನುಭವಿಸುತ್ತಿರುವ ಇಂದ್ರಾಣಿ ಮುಖರ್ಜಿ ಪಕ್ಕದಲ್ಲೇ ರಿಯಾ ಸೆಲ್ ಇದೆ.
ಭದ್ರತೆಯ ಕಾರಣಗಳಿಂದ ರಿಯಾ ಚಕ್ರವರ್ತಿ ಪ್ರತ್ಯೇಕವಾಗಿ ಒಂದೇ ಕೋಣೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತಂಕಕಾರಿ ವಿಚಾರವೆಂದರೆ ಈಕೆ ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ತನಿಖೆಯಿಂದ ಈಗಾಗಲೇ ಗಮನಸೆಳೆದಿದ್ದು, ಈ ಹಿನ್ನೆಲೆಯಲ್ಲಿ ರಿಯಾ ಮೇಲೆ ಸಹ ಕೈದಿಗಳು ಹಲ್ಲೆ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಟಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಮೂರು ಶಿಫ್ಟ್ ನಲ್ಲಿ ಇಬ್ಬರು ಕಾನ್‍ಸ್ಟೇಬಲ್ ಗಳು ನಟಿಗೆ ರಕ್ಷಣೆ ನೀಡುತ್ತಿದ್ದಾರೆ.
ಸದ್ಯ ಜೈಲಿನಲ್ಲಿ ರಿಯಾಗೆ ಮಲಗಲು ಚಾಪೆ ನೀಡಲಾಗಿದೆ. ಆದರೆ ಹಾಸಿಗೆ ಮತ್ತು ದಿಂಬು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಸೆಲ್ ನಲ್ಲಿ ಫ್ಯಾನ್ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೋರ್ಟ್ ಒಪ್ಪಿದರೆ ಟೇಬಲ್ ಫ್ಯಾನ್ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಚಾರಣೆ ವೇಳೆ ತಮ್ಮನನ್ನ ನೋಡಿ ಕಣ್ಣೀರಿಟ್ಟ ರಿಯಾ ಚಕ್ರವರ್ತಿ-25 ಬಿಟೌನ್ ಸ್ಟಾರ್ ಗಳಿಗೆ ಢವಢವ ಶುರು
ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಜೈಲಿನ ಕೈದಿಗಳಲ್ಲಿ ರೋಗ ನಿರೋಧಕ ಹೆಚ್ಚಿಸುವ ಸಲುವಾಗಿ ಹಾಲು ಮತ್ತು ಅರಶಿನ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾಕಂದರೆ ಮಹಿಳೆಯ ಏಕೈಕ ಜೈಲಾಗಿರುವ ಬೈಕುಲ್ಲಾದಲ್ಲಿ ಕಳೆದ ಕೆಲ ತಿಂಗಳಿನಲ್ಲಿ ಕೆಲವು ಕೋವಿಡ್ 19 ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಜಾಮೀನು ಅರ್ಜಿ ವಜಾ – ರಿಯಾ ಚಕ್ರವರ್ತಿಗೆ ಜೈಲೇ ಗತಿ
ಜೂನ್ 14 ರಂದು ಮೃತಪಟ್ಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಗೆ ಸಂಬಂಧಿಸಿದ ಡ್ರಗ್ಸ್ ಆರೋಪದ ಮೇಲೆ ನಟಿ ರಿಯಾ ಚಕ್ರವರ್ತಿಯನ್ನು ಮಂಗಳವಾರ ಬಂಧಿಸಿ 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ. ಸಾವನ್ನಪ್ಪಿದ ನಟ ಸುಶಾಂತ್‍ಗೆ ರಿಯಾ ಚಕ್ರವರ್ತಿ ಗಾಂಜಾ ಸೇವನೆ ಮಾಡಲು ಗಾಂಜಾ ಖರೀದಿಸುತ್ತಿದ್ದಳು ಎಂಬ ಆರೋಪದ ಮೇಲೆ ಎನ್‍ಸಿಬಿ ರಿಯಾಳನ್ನು ಅರೆಸ್ಟ್ ಮಾಡಿತ್ತು. ನಂತರ ಆಕೆ ಸ್ಥಳೀಯ ಕೋರ್ಟಿನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು ಅದು ಕೂಡ ವಜಾಗೊಂಡಿತ್ತು. ಮತ್ತೆ ಮುಂಬೈ ಕೋರ್ಟಿಗೆ ಆಕೆ ಅರ್ಜಿ ಸಲ್ಲಿಸಿದ್ದಳು. ಇದನ್ನೂ ಓದಿ: ಡ್ರಗ್ಸ್ ಅಡಿಕ್ಟ್ ಸುಶಾಂತ್‍ನನ್ನು ಪ್ರೀತಿಸಿದ್ದಕ್ಕೆ ಈ ಶಿಕ್ಷೆ: ರಿಯಾ ಪರ ವಕೀಲ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ವಾದವನ್ನು ಆಲಿಸಿದ್ದ ಕೋರ್ಟ್, ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಈ ತೀರ್ಪು ಬಂದಿದ್ದು, ರಿಯಾ ಮತ್ತು ಆಕೆಯ ಸಹೋದರ ಶೌವಿಕ್ ಚಕ್ರವರ್ತಿ ಸೇರಿದಂತೆ ಎಂಟು ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಈ ಮೂಲಕ ಮತ್ತೆ ಸೆಪ್ಟೆಂಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈಗ ಆಕೆ ಬಾಂಬೆ ಹೈಕೋರ್ಟಿಗೆ ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ