ಹೈದರಾಬಾದ್: ಲೇಡಿ ಸೂಪರ್ ಸ್ಟಾರ್ ಎಂದೇ ಸಖತ್ ಫೇಮಸ್ ಆಗಿರುವ ಬಹುಭಾಷಾ ನಟಿ ನಯನತಾರಾ ಕೊನೆಗೂ ತಾವು ಎಂಗೇಜ್ ಎಂದು ತಿಳಿಸಿದ್ದಾರೆ.
ಖಾಸಗಿ ಚಾನೆಲ್‍ವೊಂದು ನಡೆಸಿದ ಸಂದರ್ಶನದಲ್ಲಿ ಭಾಗಿಯಾಗಿದ್ದ ನಯನ ತಾರಾ ತಮ್ಮ ಬಹುಕಾದ ಗೆಳೆಯ ವಿಘ್ನೇಶ್ ಶಿವನ್ ಒಟ್ಟಿಗೆ ತಾವು ಎಂಗೇಜ್‍ಮೆಂಟ್ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ತಮ್ಮ ಎಂಗೇಜ್‍ಮೆಂಟ್ ರೀಂಗ್‍ಅನ್ನು ಬಹಿರಂಗವಾಗಿ ತೋರಿಸಿದ್ದು, ಆದಷ್ಟು ಬೇಗ ಹಸೆಮಣೆ ಏರುತ್ತಿರೋದಾಗಿ ಹೇಳಿದ್ದಾರೆ. ಈ ಮೂಲಕವಾಗಿ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ನಾನು ರೌಡಿದಾನ್ ಸಿನಿಮಾ ಸೆಟ್‍ನಲ್ಲಿ ವಿಘ್ನೇಶ್ ಅವರನ್ನು ಮೊದಲಿದೆ ಭೇಟಿಯಾಗಿದ್ದೆ, ಎಂದು ಹೇಳುತ್ತ ತಮ್ಮ ಕೈಯಲ್ಲಿ ಇರುವ ಎಂಗೇಜ್‍ಮೆಂಟ್ ರೀಂಗ್ ಎಂದು ತಿಳಿಸಿದ್ದಾರೆ.
View this post on Instagram
ಈ ಹಿಂದೆ ಹಲವು ಬಾರಿ ನಯನತಾರಾ ವಿಘ್ನೇಷ್ ಅವರ ಜೊತೆಗೆ ಇರುವ ಮುದ್ದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳು ಮದುವೆಯಾಗಿದ್ದೀರ ಎಂದು ಕೇಳುತ್ತಿದ್ದರು. ಆದರೆ ನಯನತಾರಾ ಅವರು ಎಂಗೇಜ್‍ಮೆಂಟ್ ಆಗಿದ್ದೇವೆ ಎಂದು ಹೇಳಿದ್ದಾರೆ.
View this post on Instagram