ಫೋನ್ ಬಂದ್ರ ಒಗಿಲೇನ, ಹೊತ್ಕೊಂಡ ಮಕ್ಕೋಬೇಕು ಅನಸತೈತಿ- ನೆರೆ ಸಂತ್ರಸ್ತರ ಬಗ್ಗೆ ಕುಮಟಳ್ಳಿ ನಿರ್ಲಕ್ಷ್ಯದ ಮಾತು

Public TV
1 Min Read
ckd mahesh kumathalli

ಚಿಕ್ಕೋಡಿ/ಬೆಳಗಾವಿ: ಪ್ರವಾಹ ಸಂತ್ರಸ್ತರ ಬಗ್ಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ನಿರ್ಲಕ್ಷ್ಯದ ಮಾತುಗಳನ್ನಾಡಿದ್ದು, ಈ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ. ಅಲ್ಲದೆ ಜನ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

mahesh kumathalli

ಕೆಲ ದಿನಗಳ ಹಿಂದೆ ಶಾಸಕರು ತಮ್ಮ ಆಪ್ತರ ಬಳಿ ಈ ಮಾತುಗಳನ್ನಾಡಿದ್ದು, ಪ್ರವಾಹ ಸಂತ್ರಸ್ತರನ್ನು ನಿರ್ಲಕ್ಷಿಸಿ ಮಾತನಾಡಿದ್ದಾರೆ. ಫೋನ್ ಬಂದರೆ ಸಾಕು ಒಗಿಲೇನು ಅನಸ್ತೈತಿ, ನಿಮಗೆ ಗೊತ್ತಿಲ್ಲ ಅಷ್ಟ ತಲಿ ಬ್ಯಾರೆ ಬ್ಯಾರೆ ಕಡೆ ಐತಿ, ಒಂದು ಕಡೆ ಹೊತಕೊಂಡ ಮಕ್ಕೋಬೇಕು ಅನಸ್ತೈತಿ. ಮೈಯಲ್ಲ ಬಿಗದೈತಿ, ಫೋನ್ ಬಂದ್ರ ಫೋನ್ ಒಗಿಲೇನು ಅನಸತೈತಿ ಎಂದು ತಮ್ಮ ಆಪ್ತರ ಮುಂದೆ ಕುಮಟಳ್ಳಿ ಮಾತನಾಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಶಾಸಕರ ಮುಂದಲ್ಲದೆ ನಮ್ಮ ಪರಿಸ್ಥಿತಿಯನ್ನು ಇನ್ಯಾರ ಮುಂದೆ ಹೇಳಿಕೊಳ್ಳಬೇಕು. ಶಾಸಕರೇ ಹೀಗೆ ಮಾತನಾಡಿದರೆ ಹೇಗೆ, ಪ್ರವಾಹದಲ್ಲಿ ನೂರಾರು ಜನ ಸಿಲುಕಿ ನರಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಹಾಯ ಮಾಡುವುದು ಬಿಟ್ಟು, ಇಂತಹ ನಿರ್ಲಕ್ಷ್ಯದ ಮಾತುಗಳನ್ನು ಆಡಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕರು ಹೇಳಿದ್ದೇನು?
ನಿಮಗ್ ಗೊತ್ತಿಲ್ಲ ಅಷ್ಟ, ತಲಿ ಬ್ಯಾರೆ ಬ್ಯಾರೆ ಕಡೆ ಐತಿ, ಒಂದ ಕಡೆ ಹೊತಕೊಂಡ ಮಕ್ಕೊಬೇಕು ಅನಸ್ತೈತಿ, ಮೈಯಲ್ಲ ಬಿಗದೈತಿ ಯಾವುದಾದ್ರು ಫೋನ್ ಬಂದ್ರ ಮೊಬೈಲ್ ಒಗಿಲೇನ ಅನಸ್ತೈತಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *