ಶಿವಮೊಗ್ಗ; ಚಲಿಸುತ್ತಿದ್ದ ರೈಲಿನಿಂದ ಯುವತಿವೋರ್ವಳು ಕಾಲು ಜಾರಿ ತುಂಗಾ ನದಿಗೆ ಬಿದ್ದಿದ್ದ ಘಟನೆ ಕಳೆದ ಎರಡು ದಿನದ ಹಿಂದೆ ಶಿವಮೊಗ್ಗದಲ್ಲಿ ನಡೆದಿತ್ತು.
ನದಿಗೆ ಬಿದ್ದಿದ್ದ ಯುವತಿಯನ್ನು ಶಿವಮೊಗ್ಗ ಗಾಡಿಕೊಪ್ಪದ ಸಹನಾ (24) ಎಂದು ಗುರುತಿಸಲಾಗಿತ್ತು. ಯುವತಿಯ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಕಳೆದ ಎರಡು ದಿನದಿಂದಲೂ ತುಂಗಾನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರು. ಇಂದು ಮುಂಜಾನೆ ಯುವತಿಯ ಶವ ತುಂಗಾನದಿಯಲ್ಲಿ ಪತ್ತೆಯಾಗಿದೆ
ಮೃತ ಯುವತಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತಾಯಿ ಜೊತೆ ಇಂಟರ್ ಸಿಟಿ ರೈಲಿನಲ್ಲಿ ಬರುತ್ತಿದ್ದಳು. ವೇಳೆ ಈ ಅವಘಡ ಜರುಗಿತ್ತು. ಶಿವಮೊಗ್ಗ ನಗರದ ತುಂಗಾ ನದಿಯ ರೈಲ್ವೆ ಬ್ರಿಡ್ಜ್ ಮೇಲೆ ರೈಲು ಸಂಚರಿಸುತ್ತಿದ್ದಾಗ ಯುವತಿ ಬಾಗಿಲ ಬಳಿ ನಿಂತು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಳು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ ಎಂದು ಯುವತಿಯ ತಾಯಿ ತಿಳಿಸಿದ್ದರು.
ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.