ಫೋಟೋ ಹಾಕಿ ಶಾಲಾ ದಿನಗಳನ್ನು ನೆನಪಿಸಿಕೊಂಡ ವಿರಾಟ್

Public TV
2 Min Read
virat

– ಈ ನಾಲ್ವರಲ್ಲಿ ಎಬಿಡಿ ಬೆಸ್ಟ್ ವಿದ್ಯಾರ್ಥಿಯೆಂದ ಕೊಹ್ಲಿ

ಅಬುಧಾಬಿ: ಕೊಹ್ಲಿ ಸೇರಿದಂತೆ ನಾಲ್ಕು ಆರ್‌ಸಿಬಿ ಆಟಗಾರರಿರುವ ಫೋಟೋವನ್ನು ಹಂಚಿಕೊಂಡಿರುವ ನಾಯಕ ವಿರಾಟ್ ಕೊಹ್ಲಿ ತನ್ನ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಅಬುಧಾಬಿ ಮೈದಾನದಲ್ಲಿ ನಡೆದ ಐಪಿಎಲ್-2020ಯ 39ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ಬೆಂಗಳೂರು ಬೌಲರ್ ಗಳ ಮಾರಕ ದಾಳಿಗೆ ತತ್ತರಸಿ ನಿಗದಿತ 20 ಓವರಿನಲ್ಲಿ ಎಂಟು ವಿಕೆಟ್ ಕಳೆದುಕೊಂಡು ಕೇವಲ 84 ರನ್ ಪೇರಿಸಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ಇನ್ನೂ 6.3 ಓವರ್ ಬಾಕಿ ಇರುವಂತೆ 8 ವಿಕೆಟ್‍ಗಳ ಅಂತರದಲ್ಲಿ ಗೆದ್ದು, ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಪಂದ್ಯ ಗೆದ್ದಿರುವ ಖುಷಿಯಲ್ಲಿರುವ ಕೊಹ್ಲಿ ಇಂದು ಒಂದು ಟ್ವೀಟ್ ಮಾಡಿದ್ದು, ಈ ಫೋಟೋವನ್ನು ನೋಡುತ್ತಿದ್ದರೆ, ನನ್ನ ಶಾಲಾ ದಿನಗಳ ನನಗೆ ನೆನಪಿಗೆ ಬರುತ್ತವೆ. ನಾಲ್ಕು ಹುಡುಗರು ಒಂದೇ ತರಗತಿಯವರು ಮತ್ತು ಎಬಿ ಮನೆಯಲ್ಲೇ ಹೋಂ ವಾರ್ಕ್ ಮಾಡಿಕೊಂಡು ತಯಾರಾಗಿ ಬಂದಿದ್ದಾರೆ. ಇದರ ಜೊತೆಗೆ ಉಳಿದ ಮೂವರು ಹುಡುಗರನ್ನು ತೊಂದರೆಗೆ ಸಿಲುಕಿಸಿದ್ದಾರೆ ಎಂದು ಫನ್ನಿಯಾಗಿ ಬರೆದುಕೊಂಡಿದ್ದಾರೆ. ಇದನ್ನು ಓದಿ: 1 ರನ್‌ ಅಗತ್ಯವಿದ್ದಾಗ ಕೊಹ್ಲಿ 2 ರನ್‌ ಓಡಿದ್ದು ಯಾಕೆ?

rcb 6

ಐಪಿಎಲ್‍ನಲ್ಲಿ ಉತ್ತಮ ಆಟಗಾರನ್ನು ಹೊಂದಿದ್ದರು ಇಲ್ಲಿಯವರೆಗೂ ಆರ್‌ಸಿಬಿ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಆದರೆ ಈ ಬಾರಿಯ ಐಪಿಎಲ್‍ನಲ್ಲಿ ಬೆಂಗಳೂರು ತಂಡ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಉತ್ತಮ ಫಾರ್ಮ್‍ನಲ್ಲಿ ಇದ್ದಾರೆ. ಜೊತೆಗೆ ಬೌಲರ್ ಗಳು ಮಿಂಚುತ್ತಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಮೂರರಲ್ಲಿ ಸೋತು 14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

rcb 2 1

ಕಳೆದ ಪಂದ್ಯದಲ್ಲಿ ಅದ್ಭುತವಾಗಿ ಬೌಲ್ ಮಾಡಿದ ವೇಗಿ ಮೊಹಮ್ಮದ್ ಸಿರಾಜ್ ಅವರು ಎರಡು ಓವರ್ ಬೌಲ್ ಮಾಡಿ ಒಂದು ರನ್ ನೀಡದೇ ಮೇಡನ್ ಮಾಡಿ ಮೂರು ವಿಕೆಟ್ ಕಬಳಿಸಿದರು. ಈ ಮೂಲಕ ಐಪಿಎಲ್‍ನ ಒಂದೇ ಪಂದ್ಯದಲ್ಲಿ ಎರಡು ಮೇಡನ್ ಓವರ್ ಮಾಡಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಇವರ ಜೊತೆಗೆ ಐದನೇ ಓವರ್ ಅನ್ನು ಕೂಡ ಕ್ರಿಸ್ ಮೋರಿಸ್ ಮೇಡನ್ ಮಾಡಿದರು. ನಂತರ 12ನೇ ಓವರ್ ಅನ್ನು ವಾಷಿಂಗ್ಟನ್ ಸುಂದರ್ ಅವರು ಮೇಡನ್ ಮಾಡಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ನಾಲ್ಕು ಮೇಡನ್ ಓವರ್ ಮಾಡಿದ ತಂಡ ಎಂಬ ಹೆಗ್ಗಳಿಕೆ ಆರ್‌ಸಿಬಿ ಪಾತ್ರವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *