ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನ ಚಿನ್ನದ ಹುಡುಗ ನೀರಜ್ ಚೋಪ್ರಾ ವಿಶೇಷ ಫೋಟೋ ಹಂಚಿಕೊಂಡು ಧನ್ಯವಾದ ಸಲ್ಲಿಸಿದ್ದಾರೆ. ಜಾವೆಲಿನ ಥ್ರೋನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಇಂದು ಫೇಸ್‍ಬುಕ್ ನಲ್ಲಿ ಎರಡು ಫೋಟೋ ಹಂಚಿಕೊಂಡಿದ್ದಾರೆ. ಒಂದರಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಫೋಟೋ ಇದ್ರೆ, ಅದೇ ಬೆಡ್ ಮೇಲೆ ಮಲಗಿ ಚಿನ್ನದ ಪದಕದ ಜೊತೆ ಕಾಣಿಸಿಕೊಂಡಿದ್ದಾರೆ.
ಮೇ 2019ರಿಂದ ನಿಮ್ಮೆಲ್ಲರ ಬೆಂಬಲದಿಂದ ಇಲ್ಲಿಯವರೆಗಿನ ನನ್ನ ಪಯಣ ಸುಂದರವಾಗಿದೆ. ಡಾ.ದಿನ್‍ಶಾ ಪಾರದ್ವೀಲಾ, ಕೋಚ್ ಡಾ.ಕ್ಲಾಸ್ ಮತ್ತು ಫಿಜಿಯೋ ಇಶಾನ್ ಅವರಿಗೆ ಆಭಾರಿಯಾಗಿದ್ದೇನೆ. ಇವರೆಲ್ಲರೂ ನನಗೆ ಯಾವಾಗಾಲೂ ಬೆಂಬಲ ನೀಡಿದ್ದಾರೆ. ಇವರೆಲ್ಲರ ಪರಿಶ್ರಮದಿಂದಲೇ ಗಾಯದಿಂದ ಚೇತರಿಸಿಕೊಂಡು ಭಾರತಕ್ಕೆ ಚಿನ್ನ ತರಲು ಸಾಧ್ಯವಾಯ್ತು. ಈ ಪದಕ ಜೀವನದಲ್ಲಿ ಕಷ್ಟ ಎದುರಿಸುತ್ತಿರುವ ಎಲ್ಲರಿಗೂ ಪ್ರೇರಣೆ ಆಗಲಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾನು ಸಿಂಗಲ್, ಆಟದ ಮೇಲೆ ಮಾತ್ರ ನನ್ನ ಗಮನ: ನೀರಜ್ ಚೋಪ್ರಾ
2019ರಲ್ಲಿ ಗಾಯಗೊಂಡ ಪರಿಣಾಮ ನೀರಜ್ ಕೆಲ ತಿಂಗಳು ಮೈದಾನದಿಂದ ದೂರ ಉಳಿಯುವಂತಾಗಿತ್ತು. ನೀರಜ್ ಮೊಣಕೈ ಗಾಯಗೊಂಡಿದ್ದರಿಂದ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಆಗ ಕೋಕಿಲಾಬೆಲ್ ಧೀರೂಭಾಯಿ ಆಸ್ಪತ್ರೆಗೆ ದಾಖಸಲಾಗಿತ್ತು. ಆಗ ಡಾ.ದಿನ್‍ಶಾ ಚಿಕಿತ್ಸೆ ನೀಡಿದ್ದರು. ಇದನ್ನೂ ಓದಿ: ನೀರಜ್ ಚೋಪ್ರಾ ತರಬೇತಿಗಾಗಿ 7 ಕೋಟಿ ರೂ. ಖರ್ಚು ಮಾಡಿದ್ದ ಸರ್ಕಾರ