ಪೋರ್ಚುಗಲ್: ಫೈಝರ್ ಲಸಿಕೆ ಪಡೆದಿದ್ದ ನರ್ಸ್ ಎರಡು ದಿನದ ನಂತರ ಸಾವನ್ನಪ್ಪಿರುವ ಬಗ್ಗೆ ಪೋರ್ಚುಗಲ್ ನಲ್ಲಿ ವರದಿಯಾಗಿದೆ. ನಸ್ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಪೋರ್ಚುಗಲ್ ಆರೋಗ್ಯ ಇಲಾಖೆ ಆದೇಶಿಸಿದೆ.
ಎರಡು ಮಕ್ಕಳ ತಾಯಿಯಾಗಿರುವ ಸೋನಿಯಾ ಎಜ್ವೆಡೋ (41) ಫೈಜರ್ ಲಸಿಕೆ ಪಡೆದುಕೊಂಡಿದ್ದರು. ಸೋನಿಯಾ ಪೋರ್ಚುಗೀಸ್ ಒಕೊಲೆಜಿಯೂದಲ್ಲಿ ಸರ್ಜಿಕಲ್ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಬುಧವಾರ 538 ಹೆಲ್ತ್ ವರ್ಕರ್ ಗಳಿಗೆ ಫೈಜರ್ ಲಸಿಕೆ ನೀಡಲಾಗಿತ್ತು. ಇದರಲ್ಲಿ ಸೋನಿಯಾ ಸಹ ವ್ಯಾಕ್ಸಿನ್ ಪಡೆದುಕೊಂಡು ಸಂಭ್ರಮಿಸಿದ್ದರು. ಡಿಸೆಂಬರ್ 31ರಂದು ಕುಟುಂಬದ ಜೊತೆ ರಾತ್ರಿ ಊಟ ಮಾಡಿದ್ದ ಸೋನಿಯಾ ಬೆಳಗ್ಗೆ ಸಾವನ್ನಪ್ಪಿದ್ದಾರೆ.
Advertisement
Advertisement
ಮಗಳ ಸಾವು ಹೇಗಾಯ್ತು ಅಂತ ನಮಗೂ ಗೊತ್ತಾಗುತ್ತಿಲ್ಲ. ಲಸಿಕೆ ಪಡೆದುಕೊಂಡ ಸಂಭ್ರಮದಲ್ಲಿದ್ದ ಮಗಳು ಆರೋಗ್ಯವಾಗಿದ್ದಳು. ರಾತ್ರಿ ಸಹ ಆಕೆ ಮದ್ಯ ಮತ್ತು ಅಪಾಯಕಾರಿ ಆಹಾರ ಸೇವಿಸಿರಲಿಲ್ಲ. ಫೈಜರ್ ಲಸಿಕೆ ಪಡೆಯುವ ವೇಳೆ ಸೋನಿಯಾ ಆರೋಗ್ಯವಾಗಿದ್ದರು. ಲಸಿಕೆ ಪಡೆದುಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸೋನಿಯಾ ಬರೆದುಕೊಂಡಿದ್ದರು. ಲಸಿಕೆ ಪಡೆದ ಜಾಗದಲ್ಲಿ ಸಣ್ಣ ಪ್ರಮಾಣದಲ್ಲಿ ನೋವು ಕಾಣಿಸಿಕೊಂಡಿತ್ತು ಎಂದು ಸೋನಿಯಾ ತಂದೆ ಎಬಿಲಿಯಾ ಹೇಳಿದ್ದಾರೆ.
Advertisement