– ಅಣ್ಣ, ಅತ್ತಿಗೆ ಬೆನ್ನಲ್ಲೇ ತಮ್ಮನೂ ಗುಂಡಿಕ್ಕಿಕೊಂಡ
ಲಕ್ನೋ: ಫೇಸ್‍ಬುಕ್ ಲೈವ್ ಬಳಿಕ ಪತಿಯೋರ್ವ ಪತ್ನಿಗೆ ಗುಂಡಿಕ್ಕಿ ಆತ್ಮಹತ್ಯೆಗೆ ಶರಣಾದ ಹಾಗೂ ಅಣ್ಣ ಅತ್ತಿಗೆ ಬೆನಲ್ಲೇ ತಮ್ಮನೂ ಗುಂಡಿಕ್ಕಿಕೊಂಡ ಘಟನೆ ಉತ್ತರ ಪ್ರದೇಶದ ಅಲಿಘರ್ ಜಿಲ್ಲೆಯಲ್ಲಿ ನಡೆದಿದೆ.
ಅಲಿಘರ್ ಜಿಲ್ಲೆಯ ಬಾರೌಲಾ ನಿವಾಸಿ ಶೈಲೇಂದ್ರ, ಪಿಂಕಿ ದಂಪತಿ ಹಾಗೂ ವಿಶಾಲ್ ಮೃತ ದುರ್ದೈವಿಗಳು. ಶೈಲೇಂದ್ರ ಹಾಗೂ ಪಿಂಕಿ ಪರಸ್ಪರ ಪ್ರೀತಿಸಿ ಮದುವೆಯಾವಿದ್ದರು. ಆದರೆ ವಿಶಾಲ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
Advertisement
Advertisement
ಬಾರೌಲಾ ನಿವಾಸಿ ಬಾಬುಲ್ ವರ್ಮಾ ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಅವರ ಹಿರಿಯ ಮಗ ಕುಟುಂಬದೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಉಳಿದಂತೆ ಶೈಲೇಂದ್ರ ಮತ್ತು ವಿಶಾಲ್ ಪೋಷಕರೊಂದಿಗೆ ವಾಸಿಸುತ್ತಿದ್ದರು. ಶೈಲೇಂದ್ರ ಬಿಫಾರ್ಮ ಮುಗಿಸಿ ಔಷಧದ ಅಂಗಡಿ ನಡೆಸುತ್ತಿದ್ದರು. ಶೈಲೇಂದ್ರ ನೆರೆ ಮೆನೆಯಲ್ಲೇ ವಾಸಿಸುತ್ತಿದ್ದ ಪಿಂಕಿ ವರ್ಮಾಳನ್ನು ಸುಮಾರು ಒಂದೂವರೆ ವರ್ಷ ಪ್ರೀತಿಸಿ ಮದುವೆಯಾಗಿದ್ದ. ಆದರೆ ಮನೆಯಲ್ಲಿ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು. ಬುಧವಾರ ಶೈಲೇಂದ್ರ ತಾಯಿಯೊಂದಿಗೆ ಜಗಳವಾಡಿದ್ದ.
Advertisement
ತಾಯಿಯೊಂದಿಗೆ ನಡೆದ ಜಗಳದ ಬಳಿಕ ಶೈಲೇಂದ್ರ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ ಎಂದು ಫೇಸ್‍ಬುಕ್‍ನಲ್ಲಿ ವಿಡಿಯೋ ಅಪ್‍ಲೋಡ್ ಮಾಡಿದ್ದ. “ಕುಟುಂಬದ ಕಿರುಕುಳ, ಜಗಳದಿಂದ ಬೇಸತ್ತು ಹೋಗಿದ್ದೇನೆ. ಇನ್ನು ಮುಂದೆ ಬದುಕಲು ಸಾಧ್ಯವಿಲ್ಲ. ನನ್ನ ಬಳಿ ಉತ್ತರವಿಲ್ಲ” ಎಂದು ಶೈಲೇಂದ್ರ ವಿಡಿಯೋದಲ್ಲಿ ಹೇಳಿದ್ದ.
Advertisement
ವಿಡಿಯೋ ಅಪ್‍ಲೋಡ್ ಆದ ಬಳಿಕ ಶೈಲೇಂದ್ರ ಮೊದಲು ಪತ್ನಿ ಪಿಂಕಿಗೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬೆನ್ನಲ್ಲೇ ಅಲ್ಲಿಗೆ ಬಂದ ವಿಶಾಲ್ ಕೂಡ ಗುಂಡಿಕ್ಕಿಕೊಂಡಿದ್ದಾನೆ. ಸಹೋದರರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಪಿಂಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಳು. ಹೀಗಾಗಿ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆದರೆ ಮಾರ್ಗ ಮಧ್ಯದಲ್ಲೇ ಪಿಂಕಿ ಸಾವನ್ನಪ್ಪಿದ್ದಾಳೆ.
ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಬಂದ ಅಲಿಘರ್ ಜಿಲ್ಲೆ ಬನ್ನಾ ದೇವಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮೂವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ಆರಂಭಿಸಿದ್ದಾರೆ.