ಮುಂಬೈ: ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ಮುಂಬೈ ಯುವಕನನ್ನು ಐರ್ಲೆಂಡ್‍ನಲ್ಲಿ ಕೂತ ವ್ಯಕ್ತಿ ಬಚಾವ್ ಮಾಡಿರುವ ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದ ಧುಲೆ ಪ್ರದೇಶದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಮುಂದಾದ ಯುವಕನನ್ನು ಜ್ಞಾನೇಶ್ವರ ಪಾಟೀಲ್(23) ಎಂದು ಗುರುತಿಸಲಾಗಿದೆ. ಈತ ಹಲವು ಕಾರಣಗಳಿಂದ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದನು. ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಫೇಸ್‍ಬುಕ್ ಲೈವ್ ಮಾಡಿದ್ದಾನೆ.
ಒಂದು ದಿನ ಜ್ಞಾನೇಶ್ವರ ಪಾಟೀಲ್ ಫೇಸ್‍ಬುಕ್ ಲೈವ್‍ಗೆ ಬಂದಿದ್ದಾನೆ. ಆಗ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಹೇಳಿದ್ದಾನೆ. ಕಣ್ಣೀರು ಹಾಕುತ್ತಾ ತನಗಾಗಿರುವ ಕಷ್ಟ, ನೋವು, ಹಾಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲು ಕಾರಣ ಎಲ್ಲವನ್ನೂ ಹೇಳಿಕೊಂಡು ಕಣ್ಣೀರು ಹಾಕಿದ್ದಾನೆ. ಲೈವ್‍ನಲ್ಲಿ ಮಾತನಾಡುತ್ತಾ ಕುತ್ತಿಗೆಯನ್ನು ರೇಸರ್‍ನಿಂದ ಕತ್ತರಿಸಿಕೊಂಡು ಬಿಟ್ಟಿದ್ದಾನೆ. ಈ ಲೈವ್ ವೀಡಿಯೋವನ್ನು ಐರ್ಲೆಂಡ್‍ನಲ್ಲಿರುವ ಫೇಸ್‍ಬುಕ್ ಮುಖ್ಯ ಕಚೇರಿಯ ಸಿಬ್ಬಂದಿ ನೋಡಿದ್ದಾರೆ. ಕೂಡಲೇ ಸೈಬರ್ ಡಿಸಿಪಿ ರಶ್ಮಿ ಕರಂಡಿಕರ್ ಅವರಿಗೆ ತಿಳಿಸಿದ್ದಾರೆ. ನಂತರ ಅವನ ಫೋಟೋವನ್ನು ಹಾಕಿ ಲೈವ್ ಸೈಬರ್ ಪೊಲೀಸರಿಗೆ ಕಳಿಸಿದ್ದಾರೆ.
ಪೊಲೀಸರು ಯುವಕನಿದ್ದ ಸ್ಥಳವನ್ನು ಪತ್ತೆ ಹಚ್ಚಿದ್ದಾರೆ. ದುಲೈ ಪ್ರಾಂತ್ಯದಲ್ಲಿರುವ ಆತನ ಮನೆಗೆ ಹೋಗಿ ನೋಡಿದಾಗ ಯುವಕ ಕತ್ತು ಕುಯ್ದುಕೊಂಡು ರಕ್ತದ ಮಡುವಿನಲ್ಲಿ ಬಿದಿದ್ದನು. ಆದರೆ ಯುವಕ ಉಸಿರಾಡುತ್ತಿದ್ದನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಯುವಕನ ಪ್ರಾಣ ರಕ್ಷಣೆ ಮಾಡಿದ್ದಾರೆ. ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರು ಫೇಸ್‍ಬುಕ್ ಲೈವ್ ಬರುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಆದರೆ ಈತ ಲೈವ್ ಬಂದಿರುವುದರಿಂದ ಪ್ರಾಣ ಉಳಿದಿದೆ. ಎಲ್ಲೋ ಇರುವ ವ್ಯಕ್ತಿ ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವನ ಪ್ರಾಣ ಉಳಿಸಿರುವುದು ವಿಚಿತ್ರವಾಗಿದೆ.