-ಕೊಲೆಯ ದೃಶ್ಯ ಮೊಬೈಲ್‍ನಲ್ಲಿ ಸೆರೆ
ಚಂಡೀಗಢ: ಫೇಸ್‍ಬುಕ್‍ನಲ್ಲಿ ವಾಗ್ವಾದ ನಡೆದು ಮಾಜಿ ಸೈನಿಕನೋರ್ವ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‍ನಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು 26 ವರ್ಷದ ಸುಖ್‍ಚೈನ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿ ಜಸ್ಬೀರ್ ಸಿಂಗ್ ಯುವಕನನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಸುಖ್‍ಚೈನ್ ಸಿಂಗ್ ತಂದೆ ಪರಮ್‍ಜಿತ್ ಸಿಂಗ್ ಅವರು ತಾರ್ನ್ ತರಣ್ ಜಿಲ್ಲೆಯ ಕಿಲ್ಲಾ ಕವಿ ಸಂತೋಖ್ ಸಿಂಗ್ ಗ್ರಾಮದಲ್ಲಿ ಮೆಡಿಕಲ್ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.
Advertisement
Advertisement
ಈ ಅಂಗಡಿಯಲ್ಲಿ ಸುಖ್‍ಚೈನ್ ಕೂಡ ಕೆಲಸ ಮಾಡುತ್ತಿದ್ದು, ಇದರ ಜೊತೆಗೆ ಅಂಗಡಿ ಹೆಸರಿನಲ್ಲಿ ಒಂದು ಫೇಸ್‍ಬುಕ್ ಪೇಜ್ ನಡೆಸುತ್ತಿದ್ದ. ಈ ಫೇಸ್‍ಬುಕ್ ಪೇಜ್‍ನಲ್ಲಿ ಆರೋಪಿ ಜಸ್ಬೀರ್ ಸಿಂಗ್ ನೀವು ಅಂಗಡಿಯಲ್ಲಿ ಡ್ರಗ್ಸ್ ಮಾತ್ರೆಗಳನ್ನು ಮಾರಾಟ ಮಾಡುತ್ತೀರಾ ಎಂದು ಕಮೆಂಟ್ ಮಾಡಿದ್ದ. ಜೊತೆಗೆ ಕುಟುಂಬದ ಬಗ್ಗೆಯೂ ಕೆಟ್ಟದಾಗ ಮಾತನಾಡಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.
Advertisement
Advertisement
ಇದಾದ ನಂತರ ಸುಖ್‍ಚೈನ್ ಈ ರೀತಿ ಕಮೆಂಟ್ ಮಾಡಬೇಡ ಎಂದು ಜಸ್ಬೀರ್ ಸಿಂಗ್ ಹೇಳಿದ್ದಾನೆ. ಆದರೂ ಆತ ಮಾತನ್ನು ಕೇಳಿಲ್ಲ. ನಂತರ ಸುಖ್‍ಚೈನ್ ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡುತ್ತಾ, ಜಸ್ಬೀರ್ ಜೊತೆ ಜಗಳ ಮಾಡಲು ಹೋಗಿದ್ದಾನೆ. ಈ ವೇಳೆ ಮನೆಯ ಚಾವಣಿ ಮೇಲೆ ಬಂದೂಕು ಹಿಡಿದು ನಿಂತ ಆರೋಪಿ ಶೂಟ್ ಮಾಡುತ್ತೇನೆ ಎಂದು ಹೇಳಿದ್ದಾನೆ. ಆಗ ಗುಂಡಿಕ್ಕು ಎಂದು ಮುಂದೆ ಹೋದಾಗ, ಆರೋಪಿ ಶೂಟ್ ಮಾಡಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಸುಖ್‍ಚೈನ್ ಮಾಡಿರುವ ಮೊಬೈಲ್ ವಿಡಿಯೋದಲ್ಲಿ ಜಸ್ಬೀರ್ ಗನ್ ಅನ್ನು ಲೋಡ್ ಮಾಡಿ ಶೂಟ್ ಮಾಡಿರುವುದು ಸೆರೆಯಾಗಿದೆ. ಜಸ್ಬೀರ್ ಶೂಟ್ ಮಾಡಿದ ನಂತರ ಸುಖ್‍ಚೈನ್‍ನನ್ನು ಆಸ್ಪತ್ರೆಗೆ ಕರೆತಂದಿದ್ದು, ಆತ ಅಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಘಟನೆಯ ನಂತರ ಆರೋಪಿ ಜಸ್ಬೀರ್ ಸಿಂಗ್ ಎಸ್ಕೇಪ್ ಆಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.