ಹುಬ್ಬಳ್ಳಿ: ಹುಡ್ಗೀರ ಖಾಸಗಿ ಫೋಟೋಗಳನ್ನು ಸಂಗ್ರಹಿಸಿ ಹಣಕ್ಕಾಗಿ ಬ್ಲಾಕ್‍ಮೇಲ್ ಮಾಡೋದನ್ನು ಎಲ್ಲರೂ ಕೇಳಿರುತ್ತಾರೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇದು ಉಲ್ಟಾ ಆಗಿದೆ. ಯುವತಿ ಅಂದಕ್ಕೆ ಮರುಳಾದ ಯುವಕನೊಬ್ಬ ಈಗ ಪೇಚಿಗೆ ಸಿಲುಕಿ ಕಣ್ಣೀರಿಡುತ್ತಿದ್ದಾನೆ.
ಅಷ್ಟಕ್ಕೂ ಆಗಿದ್ದಿಷ್ಟೆ. ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರೋ ಯುವಕ ಫೇಸ್‍ಬುಕ್‍ನಲ್ಲಿ ಕಳೆದ ಕೆಲ ದಿನಗಳ ಹಿಂದೆ ರಿಯಾ ಶರ್ಮಾ ಎಂಬ ಯುವತಿಯ ಜೊತೆ ಫ್ರೆಂಡ್‍ಶಿಪ್ ಮಾಡ್ಕೊಂಡು ಮೆಸೆಂಜರ್‍ನಲ್ಲಿ ಚಾಟಿಂಗ್ ಶುರು ಹಚ್ಕೊಂಡಿದ್ದಾನೆ. ಆಕೆ ವಿಡಿಯೋ ಕಾಲ್ ಮಾಡಿ ಯುವಕನ ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿದ್ದಾಳೆ.
ಕೊನೆಗೆ ಯುವಕನ ವಿಡಿಯೋವನ್ನೇ ಬಂಡವಾಳ ಮಾಡಿಕೊಂಡು ಆತನ ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಮೊದಲಿಗೆ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಯುವತಿ ಕೊನೆಗೆ 50,000 ಹಣ ನೀಡುವಂತೆ ಬೆದರಿಸಿದ್ದಾಳೆ. ಹಣ ನೀಡದಿದ್ರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮಾನ ಕಳೆಯುವುದಾಗಿ ಬೆದರಿಸಿದ್ದಾನೆ. ಯುವತಿಯ ಕಾಟಕ್ಕೆ ಬೇಸತ್ತ ಯುವಕ ಇದೀಗ ಯುವತಿಯ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾನೆ.