ಮುಂಬೈ: ಫೇಸ್‌ಬುಕ್ ಬಳಿಕ ಗೂಗಲ್ ಕಂಪನಿ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಕಂಪನಿಯಲ್ಲಿ ಭಾರೀ ಪ್ರಮಾಣದಲ್ಲಿ ಹಣವನ್ನು ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ.
ಎರಡು ದಿನಗಳ ಹಿಂದೆ ಗೂಗಲ್ ಸಿಇಒ ಸುಂದರ್ ಪಿಚೈ ಭಾರತದಲ್ಲಿ 10 ಶತಕೋಟಿ ಡಾಲರ್(75 ಸಾವಿರ ಕೋಟಿ ರೂ.) ಹಣವನ್ನು ಹೂಡಿಕೆ ಮಾಡಲಿದ್ದೇವೆ ಎಂದು ತಿಳಿಸಿದ್ದರು. ಈ ಘೋಷಣೆಯ ಬೆನ್ನಲ್ಲೇ ಈಗ ಗೂಗಲ್ ಜಿಯೋದಲ್ಲಿ 4 ಶತಕೋಟಿ ಡಾಲರ್(30 ಸಾವಿರ ಕೋಟಿ ರೂ.) ಹಣವನ್ನು ಹೂಡಿಕೆ ಮಾಡುವ ಸಾಧ್ಯತೆಯಿದೆ.
Advertisement
Advertisement
ಈ ಬಗ್ಗೆ ಎರಡು ಕಂಪನಿಗಳಿಂದ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಷೇರು ಖರೀದಿ ಸಂಬಂಧ ಕಂಪನಿಗಳ ನಡುವೆ ಮಾತುಕತೆ ನಡೆಯುತ್ತಿದ್ದು ಈ ವಾರವೇ ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
Advertisement
ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೇ.90 ರಷ್ಟು ಆಂಡ್ರಾಯ್ಡ್ ಬಳಕೆದಾರರಿದ್ದಾರೆ. ಹೀಗಾಗಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಫೋನ್ ಮಾರುಕಟ್ಟೆಯಾದ ಭಾರತದಲ್ಲಿ ಹೂಡಿಕೆ ಮಾಡಲು ಗೂಗಲ್ ಮುಂದಾಗುತ್ತಿದೆ.
Advertisement
ಭಾರತದಲ್ಲಿ ಜಿಯೋಗೆ ಈಗಾಗಲೇ 40 ಕೋಟಿ ಗ್ರಾಹಕರು(ಶೇ.32.5 ರಷ್ಟು) ಇದ್ದಾರೆ. ಕಂಪನಿಯ ಬೆಳವಣಿಗೆ ದರ ಗಮನಿಸಿದರೆ 2025ರ ವೇಳೆಗೆ ಭಾರತ ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ.48ರಷ್ಟು ಪಾಲನ್ನು ಹೊಂದಬಹುದದು ಎಂಬ ವಿಶ್ಲೇಷಣೆ ಕೇಳಿಬಂದಿದೆ.
ಒಟ್ಟು 5.16 ಲಕ್ಷ ಕೋಟಿ ರೂ. ಮೌಲ್ಯದ ಕಂಪನಿಯಾಗಿರುವ ಜಿಯೋ ತ್ರೈಮಾಸಿಕದಲ್ಲಿ 12 ಹೂಡಿಕೆದಾರರಿಗೆ ಒಟ್ಟು 1.18 ಲಕ್ಷ ಕೋಟಿ ರೂ.(ಶೇ.25.2) ಮೌಲ್ಯದ ಷೇರುಗಳನ್ನು ಮಾರಾಟ ಮಾಡಿತ್ತು.
ಜಿಯೋವನ್ನು ಬಹುರಾಷ್ಟ್ರೀಯ ಡಿಜಿಟಲ್ ಕಂಪನಿಯಾಗಿ ರೂಪಿಸಲು ಮುಕೇಶ್ ಅಂಬಾನಿ ಪ್ಲ್ಯಾನ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಮೆರಿಕದ ಷೇರು ಮಾರುಕಟ್ಟೆ ನಾಸ್ಡಾಕ್‌ನಲ್ಲೂ ಜಿಯೋ ಕಂಪನಿ ಲಿಸ್ಟ್ ಆಗುವ ಸಾಧ್ಯತೆಯಿದೆ.
ಮುಂದೆ ಭಾರತದಲ್ಲಿ 5ಜಿ ನೆಟ್‌ವರ್ಕ್ ಬರಲಿರುವ ಹಿನ್ನೆಲೆಯಲ್ಲಿ ಈ ವಾರವೇ ಅಮೆರಿಕದ ಚಿಪ್ ತಯಾರಕಾ ಕ್ವಾಲಕಂ ಕಂಪನಿ ಜಿಯೋದಲ್ಲಿ 730 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿತ್ತು.
ಯಾರ ಹೂಡಿಕೆ ಎಷ್ಟಿದೆ?
ಫೇಸ್‌ಬುಕ್ – 43,573.62 ಕೋಟಿ ರೂ.(ಶೇ.9.99)
ಸಿಲ್ವರ್ ಲೇಕ್ ಪಾರ್ಟ್‌ನರ್ಸ್ 5,655.75 ಕೋಟಿ ರೂ.(ಶೇ.1.15)
ವಿಸ್ತಾ ಇಕ್ವಿಟಿ ಪಾರ್ಟ್‌ನರ್ಸ್ 11,367 ಕೋಟಿ ರೂ.(ಶೇ.2.32)
ಜನರಲ್ ಅಟ್ಲಾಂಟಿಕ್ – 6,598.38 ಕೋಟಿ ರೂ.(ಶೇ.1.34)
ಕೆಕೆಆರ್ – 11,367 ಕೋಟಿ ರೂ.(ಶೇ.2.32)
ಮುಬಡಾಲ – 9,093.60 ಕೋಟಿ ರೂ.(ಶೇ.1.85)
ಸಿಲ್ವರ್ ಲೇಕ್ ಪಾರ್ಟನರ್ ಮತ್ತಷ್ಟು ಹೂಡಿಕೆ – 4,546.80 ಕೋಟಿ ರೂ. (ಶೇ.0.93)
ಅಬುಧಾಬಿ ಇನ್ವೆಸ್ಟ್‌ಮೆಂಟ್ ಅಥಾರಿಟಿ – 5,683.50 ಕೋಟಿ ರೂ.(ಶೇ.1.16 )
ಟಿಪಿಜಿ – 4,546.8 ಕೋಟಿ ರೂ.(ಶೇ.93)
ಎಲ್ ಕಟ್ಟರ್‌ಟನ್ – 1,894 ಕೋಟಿ ರೂ.(ಶೇ.0.39)
ಕ್ವಾಲಕಂ – 730 ಕೋಟಿ ರೂ.(ಶೇ.0.15)
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸೋಮವಾರ ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಬಳಿಕ ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚೈ 10 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ತಿಳಿಸಿದ್ದರು.
ಈ ಸಂಬಂಧ ಟ್ವೀಟ್ ಮಾಡಿದ್ದ ಅವರು, ಭಾರತದಲ್ಲಿ ಡಿಜಿಟೈಸೇಶನ್‌ಗಾಗಿ ಗೂಗಲ್ ಕಂಪನಿ 10 ಶತಕೋಟಿ ಡಾಲರ್ ಫಂಡ್ ಘೋಷಿಸಲು ಬಹಳ ಉತ್ಸುಕನಾಗಿದ್ದೇನೆ. ಡಿಜಿಟಲ್ ಇಂಡಿಯಾಕ್ಕಾಗಿ ಪ್ರಧಾನಿ ಮೋದಿಯವರ ದೂರದೃಷ್ಟಿಗೆ ಧನ್ಯವಾದಗಳು ಎಂದು ಹೇಳಿದ್ದರು.
Today at #GoogleForIndia we announced a new $10B digitization fund to help accelerate India’s digital economy. We’re proud to support PM @narendramodi’s vision for Digital India – many thanks to Minister @rsprasad & Minister @DrRPNishank for joining us. https://t.co/H0EUFYSD1q
— Sundar Pichai (@sundarpichai) July 13, 2020
ಮುಂದಿನ 5-7 ವರ್ಷಗಳಲ್ಲಿ ನಾವು 75 ಸಾವಿರ ಕೋಟಿ ರೂ. ಹಣವನ್ನು ಹೂಡಿಕೆ ಮಾಡುತ್ತೇವೆ. 100 ಕೋಟಿ ಜನ ಆನ್‌ಲೈನ್‌ಗೆ ಬರುವ ಮೂಲಕ ದೇಶ ಪ್ರಗತಿಯನ್ನು ಸಾಧಿಸಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು, ಕೈಗೆಟುಕುವ ದತ್ತಾಂಶ ಮತ್ತು ವಿಶ್ವ ದರ್ಜೆಯ ಟೆಲಿಕಾಂ ಮೂಲಸೌಕರ್ಯಗಳು ಈ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಟ್ಟಿವೆ ಎಂದು ಪಿಚೈ ತಿಳಿಸಿದ್ದಾರೆ.