ನವದೆಹಲಿ: ವಿದೇಶಿ ಆ್ಯಪ್ ಬ್ಯಾನ್ ಮಾಡುವ ಕುರಿತು ಕೇಂದ್ರ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, 59 ಚೀನಿ ಆ್ಯಪ್‍ಗಳನ್ನು ದೇಶಾದ್ಯಂತ ಬ್ಯಾನ್ ಮಾಡಿದ ಬಳಿಕ ಇದೀಗ ಸೇನೆಗೆ ವಿಶೇಷ ಸೂಚನೆಯೊಂದನ್ನು ನೀಡಲಾಗಿದೆ.
ಕೇಂದ್ರ ಸರ್ಕಾರ ಆ್ಯಪ್ ನಿಷೇಧ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಈಗಾಗಲೇ ಚೀನಾ ಆ್ಯಪ್‍ಗಳನ್ನು ಬ್ಯಾನ್ ಮಾಡಲಾಗಿದೆ. ಇದೀಗ ಸೇನೆಗೆ 89 ಆ್ಯಪ್‍ಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ. ಭಾರತೀಯ ಸೇನೆ ಈ ಕುರಿತು ಯೋಧರಿಗೆ ಸೂಚನೆ ನೀಡಿದ್ದು, ಫೇಸ್ಬುಕ್, ಇನ್‍ಸ್ಟಾಗ್ರಾಮ್ ಸೇರಿದಂತೆ ಒಟ್ಟು 89 ಆ್ಯಪ್‍ಗಳನ್ನು ಡಿಲೀಟ್ ಮಾಡುವಂತೆ ಸೂಚನೆ ನೀಡಲಾಗಿದೆ.
Advertisement
Advertisement
ಈ ಪಟ್ಟಿಯಲ್ಲಿ ಚೀನಾದ ಟಿಕ್ ಟಾಕ್, ಬಿಗೋ ಲೈವ್, ವಿಯ್ ಚಾಟ್, ಟ್ರ್ಯೂ ಕಾಲರ್, ಝೂಮ್, ವಿಗೋ ವಿಡಿಯೋ ಸೇರಿದಂತೆ ಒಟ್ಟು 89 ವಿದೇಶಿ ಆ್ಯಪ್‍ಗಳನ್ನು ಡಿಲೀಟ್ ಮಾಡುವಂತೆ ಸೂಚಿಸಿದೆ. ಮಾಹಿತಿ ಸೋರಿಕೆ ಹಿನ್ನೆಲೆ ಆ್ಯಪ್‍ಗಳನ್ನು ಅನ್‍ಇನ್‍ಸ್ಟಾಲ್ ಮಾಡುವಂತೆ ಸೂಚಿಸಿದೆ.
Advertisement
ಈ ಪಟ್ಟಿಯಲ್ಲಿ ಡೇಟಿಂಗ್ ಆ್ಯಪ್‍ಗಳಾದ ಟಿಂಡರ್, ಹ್ಯಾಪನ್, ಟ್ರ್ಯೂಲಿ ಮ್ಯಾಡ್ಲಿ, ಐಸ್ಲೆ, ಕಾಫಿ ಮೀಟ್ಸ್ ಬಗೆಲ್, ಕೌಚ್ ಸರ್ಫಿಂಗ್ ಹಾಗೂ ನ್ಯೂಸ್ ಆ್ಯಪ್ ಡೇಲಿ ಹಂಟ್ ಸಹ ಸೇರಿಕೊಂಡಿವೆ. ಒಟ್ಟು 13 ಲಕ್ಷ ಭಾರತೀಯ ಸೇನೆಯ ಸಿಬ್ಬಂದಿಗೆ ಜುಲೈ 15ರೊಳಗೆ ಈ ಆ್ಯಪ್‍ಗಳನ್ನು ಡಿಲೀಟ್ ಮಾಡುವಂತೆ ಆದೇಶಿಸಲಾಗಿದೆ.
Advertisement
Indian Army has asked its personnel to delete 89 apps from their smartphones including Facebook, TikTok, Truecaller and Instagram to plug leakage of information: Indian Army Sources pic.twitter.com/l23Lu5ndNh
— ANI (@ANI) July 8, 2020
ಇತ್ತೀಚೆ ಚೀನಾ-ಭಾರತ ನಡುವೆ ಗಾಲ್ವಾನಾ ವ್ಯಾಲಿಯ ಎಲ್‍ಎಸಿಯಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದು, ಇದರ ಬೆನ್ನಲ್ಲೇ ಚೀನಾ ವಿರುದ್ಧ ಭಾರತ ಆ್ಯಪ್ ಸಮರ ಸಾರಿದೆ. 10 ದಿನಗಳ ಹಿಂದಷ್ಟೇ ಭಾರತ ಚೀನಿ ಮೂಲದ 59 ಆ್ಯಪ್‍ಗಳನ್ನು ಬ್ಯಾನ್ ಮಾಡಿದೆ. ಭಾರತದ ಸಾರ್ವಭೌಮತ್ವ ಹಾಗೂ ಸಮಗ್ರತೆಗೆ ಧಕ್ಕೆ ಉಂಟಾಗುವ ಹಿನ್ನೆಲೆ ಆ್ಯಪ್ ಬ್ಯಾನ್ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.