ಬೆಂಗಳೂರು: ಇತ್ತೀಚೆಗೆ ಕೆಲ ಯೂಟ್ಯೂಬ್ ಚಾನಲ್‍ಗಳಲ್ಲಿ ಮೇಘನಾ ರಾಜ್ ಅವರಿಗೆ ಅವಳಿ ಮಕ್ಕಳಾಗಿವೆ ಎಂಬ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು. ಆ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಗಮನಿಸಿದ ಮೇಘನಾ ರಾಜ್ ಫೇಕ್ ಸುದ್ದಿಗಳ ವಿರುದ್ಧ ಗರಂ ಆಗಿದ್ದಾರೆ.
Advertisement
ನಟಿ ಮೇಘನಾ ಟ್ವಿಟ್ಟರ್, ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಫೇಕ್ ಸುದ್ದಿಗಳ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವಿಡಿಯೋದ ಸ್ಕ್ರೀನ್‍ಶಾಟ್ ತೆಗೆದುಕೊಂಡು ಆ ಫೋಟೋವನ್ನು ಪೋಸ್ಟ್ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
“ಎಲ್ಲರಿಗೂ ನಮಸ್ಕಾರ..ಶೀಘ್ರದಲ್ಲೇ ಈ ವಿಚಾರಗಳ ಬಗ್ಗೆ ನಾನೇ ಮಾತನಾಡುತ್ತೇನೆ. ಅಲ್ಲಿಯವರೆಗೆ ನನ್ನ ಅಭಿಮಾನಿಗಳು ಮತ್ತು ಫಾಲೋವರ್ಸ್ ಯಾವುದೇ ವಿಡಿಯೋ ಅಥವಾ ಸುದ್ದಿಗಳನ್ನು ಗಮನಿಸದೆ ನಂಬಬೇಡಿ. ಅಂತಹ ಸುದ್ದಿಗಳನ್ನು ಪರಿಶೀಲಿಸಿ” ಎಂದು ಮೇಘನಾ ರಾಜ್ ಮನವಿ ಮಾಡಿಕೊಂಡಿದ್ದಾರೆ.
Advertisement
ಅಷ್ಟೇ ಅಲ್ಲದೇ “ಸತ್ಯ ಏನೆಂದು ತಿಳಿದುಕೊಳ್ಳದೆ ಕೆಲವರು ಹೆಚ್ಚಿನ ವೀಕ್ಷಕರು ಮತ್ತು ಅಧಿಕ ವೀಕ್ಷಣೆ ಪಡೆದುಕೊಳ್ಳಲು ಈ ರೀತಿ ಹೇಳುತ್ತಿದ್ದಾರೆ. ಹಾಗೇನಾದರೂ ನನ್ನ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನಾವೇ ನೇರವಾಗಿ ನೀಡುತ್ತೇವೆ. ಇಂತಹ ಸುದ್ದಿಗಳಿಗೆ ಕಿವಿಗೊಡಬೇಡಿ “ಎಂದು ಮೇಘನಾ ರಾಜ್ ಸ್ಪಷ್ಟನೆ ಕೊಟ್ಟಿದ್ದಾರೆ.
— MEGHANA RAJ SARJA (@meghanasraj) September 24, 2020
ಫೇಕ್ ಸುದ್ದಿ ಏನು?
ಕೆಲ ಯೂಟ್ಯೂಬ್ ಚಾಲನ್‍ಗಳಲ್ಲಿ “ಎರಡು ಗಂಡು ಮಗು ಜೊತೆ ಮೇಘನಾ-ಧ್ರುವ, ಮಗು ಹಿಡಿದು ಕಣ್ಣೀರು ಹಾಕಿದ ಧ್ರುವ ಎಂದು ಬರೆದುಕೊಂಡು ವಿಡಿಯೋವನ್ನು ಅಪ್ಲೋಡ್ ಮಾಡಿವೆ. ಮತ್ತೊಂದರಲ್ಲಿ ಸಮಾಧಿ ಬಳಿ ಹೋಗಿ ಮೇಘನಾ ಕಣ್ಣೀರಾಕುತ್ತಾ ಮಾಡಿದ್ದೇನು ಗೊತ್ತಾ ಎಂಬ ಪ್ರಶ್ನೆಗಳನ್ನು ಹಾಕಿ ವಿಡಿಯೋ ಶೇರ್ ಮಾಡಿದ್ದಾರೆ.