ಫೆ.14ರಂದು ಅಭಿಮಾನಿಗಳಿಗೆ ‘ಹಲೋ’ ಹೇಳಲಿದ್ದಾನೆ ಜೂ.ಚಿರು

Public TV
1 Min Read
MEGHANA copy

ಬೆಂಗಳೂರು: ಪ್ರೇಮಿಗಳ ದಿನದಂದೇ ಸ್ಯಾಂಡಲ್‍ವುಡ್ ನಟ ದಿ. ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಮುದ್ದಿನ ಪುತ್ರ ತಮ್ಮ ಅಭಿಮಾನಿಗಳಿಗೆ ‘ಹಲೋ’ ಹೇಳಲಿದ್ದಾನೆ.

ಈ ಕುರಿತು ಸ್ವತಃ ಮೇಘನಾ ಅವರು ಇಂದು ತಿಳಿಸಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಚಿರು ಹಾಗೂ ತಮ್ಮ ಮದುವೆ ಹಾಗೂ ಕೆಲವೊಂದು ಫೋಟೋಗಳೊಂದಿಗೆ ವೀಡಿಯೋ ಬಿಡುಗಡೆ ಮಾಡಿರುವ ಮೇಘನಾ, ಫೆ. 14ರಂದು ಜ್ಯೂನಿಯರ್ ನಿಮಗೆಲ್ಲಾ ‘ಹಲೋ’ ಹೇಳಲಿದ್ದಾನೆ ಎಂದು ತಿಳಿಸಿದ್ದಾರೆ.

 

View this post on Instagram

 

A post shared by Meghana Raj Sarja (@megsraj)

ಎರಡು ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಮೇಘನಾ, ಫೆಬ್ರವರಿ 12ರಂದು ರೋಮಾಂಚನಕಾರಿ ಸುದ್ದಿಯೊಂದು ಹೊರ ಬೀಳಲಿದೆ. ಆ ದಿನಕ್ಕಾಗಿ ನಾನು ಕೂಡ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಆದರೆ ಸಮಯ ತಿಳಿಸಿರಲಿಲ್ಲ. ಆ ಬಳಿಕ ನಿನ್ನೆ ಮತ್ತೊಂದು ಪೋಸ್ಟ್ ಹಾಕಿ ನಾಳೆ 9 ಗಂಟೆಗೆ ಗುಡ್ ನ್ಯೂಸ್ ಹೊರಬೀಳಲಿದೆ ಎಂದು ತಿಳಿಸಿದ್ದರು.

Meghana Raj 1

ಮೇಘನಾ ಪೋಸ್ಟ್ ಶೇರ್ ಮಾಡಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಕೂಡ ಈ ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಅಂದು ನಮ್ಮ ಜೂನಿಯರ್ ಚಿರು ಫೋಟೋ ರಿವೀಲ್ ಆಗುತ್ತೆ ಎಂದು ಕಮೆಂಟ್ ಮಾಡಿದ್ದರು. ಹಲವರು ನಾಮಕರಣದ ದಿನಾಂಕವನ್ನ ಹಂಚಿಕೊಳ್ಳಬಹುದು ಅಥವಾ ತಮ್ಮ ಮುಂದಿನ ಸಿನಿಮಾ ಅಪ್‍ಡೇಟ್ ಬಗ್ಗೆ ಮಾಹಿತಿ ನೀಡಬಹುದು ಎಂದು ಹೇಳುತ್ತಿದ್ದಾರೆ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಎಮೋಜಿಗಳನ್ನ ಹಾಕಿ ಪ್ರತಿಕ್ರಿಯಿಸಿದ್ದರು.

 

View this post on Instagram

 

A post shared by Meghana Raj Sarja (@megsraj)

ಇದೀಗ ಮೇಘನಾ ಬಿಡುಗಡೆ ಮಾಡುವ ವೀಡಿಯೋದಿಂದಾಗಿ ಅಭಿಮಾನಿಗಳು ಮತ್ತಷ್ಟು ಕುತೂಹಲಕ್ಕೀಡಾಗಿದ್ದಾರೆ. ಅಲ್ಲದೆ ನಾಮಕರಣ ಇರಬಹುದೇನೋ ಅಂತ ಮಾತನಾಡಿಕೊಳ್ಳುತ್ತಿದ್ದಾರೆ.

 

View this post on Instagram

 

A post shared by Meghana Raj Sarja (@megsraj)

Share This Article
Leave a Comment

Leave a Reply

Your email address will not be published. Required fields are marked *