ಬೆಂಗಳೂರು: ಫೆಬ್ರವರಿ 12ರಂದು ತಮ್ಮ ಅಭಿಮಾನಿಗಳಿಗೆ ನಟಿ ಮೇಘನಾ ರಾಜ್ ರೋಮಾಂಚನಕಾರಿ ನ್ಯೂಸ್ ನೀಡಲಿದ್ದಾರೆ. ಈ ಕುರಿತು ಮೇಘನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆ ವಿಶೇಷ ರೋಮಾಂಚನಕಾರಿ ಸುದ್ದಿಗಾಗಿ ನೀವು ಶುಕ್ರವಾರದವರೆಗೂ ವೇಟ್ ಮಾಡಬೇಕು. ಇನ್ನು ವಿಶೇಷವೆಂದರೆ ಆ ನ್ಯೂಸ್ ಗಾಗಿ ಮೇಘನಾ ರಾಜ್ ಸಹ ಕಾತುರಾಗಿದ್ದಾರೆ.
ಅಭಿಮಾನಿಗಳು ಮೇಘನಾª ಅವರ ಪೋಸ್ಟ್ ಶೇರ್ ಮಾಡಿಕೊಳ್ಳುತ್ತಿದ್ದು, ಅಂದು ನಮ್ಮ ಜೂನಿಯರ್ ಚಿರು ಫೋಟೋ ರಿವೀಲ್ ಆಗುತ್ತೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಹಲವರು ನಾಮಕರಣದ ದಿನಾಂಕವನ್ನ ಹಂಚಿಕೊಳ್ಳಬಹುದು ಅಥವಾ ತಮ್ಮ ಮುಂದಿನ ಸಿನಿಮಾ ಅಪ್ಡೇಟ್ ಬಗ್ಗೆ ಮಾಹಿತಿ ನೀಡಬಹುದು ಎಂದು ಹೇಳುತ್ತಿದ್ದಾರೆ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಎಮೋಜಿಗಳನ್ನ ಹಾಕಿ ಪ್ರತಿಕ್ರಿಯಿಸುತ್ತಿದ್ದಾರೆ. ಇದನ್ನೂ ಓದಿ: ಹಲವು ದಿನಗಳ ಬಳಿಕ ಮೇಘನಾ ಔಟಿಂಗ್ – ಫೋಟೋ ವೈರಲ್
View this post on Instagram
ಶುಕ್ರವಾರ ಸರ್ಪ್ರೈಸ್ ನ್ಯೂಸ್ ಹೊರ ಬೀಳೋದು ಪಕ್ಕಾ ಆಗಿದ್ದು, ಆದ್ರೆ ಮೇಘನಾ ರಾಜ್ ಸಿಹಿ ಸುದ್ದಿ ನೀಡುವ ಸಮಯವನ್ನ ಹೇಳಿಲ್ಲ. ಈ ಮುನ್ನ ಜನವರಿ 31 ಜೂನಿಯರ್ ಚಿರುಗೆ ಮೊದಲ ಬಾರಿಗೆ ಪೋಲಿಯೋ ಲಸಿಕೆ ಹಾಕಿಸಿರುವ ಕೈ ಉಗುರಿನ ಮೇಲೆ ಇಂಕ್ ಆಗಿದ್ದ ಫೋಟೋವನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಪೋಲಿಯೋ ವಿರುದ್ಧ ಹೋರಾಡಲು ಮಕ್ಕಳಿಗೆ ಲಸಿಕೆ ಹಾಕಿಸಿ ಎಂದು ಕರೆ ನೀಡಿದ್ದರು. ಇದನ್ನೂ ಓದಿ: ಭಾವನಾತ್ಮಕ ಸಾಲುಗಳೊಂದಿಗೆ ತಂದೆಯ ಜನ್ಮದಿನಕ್ಕೆ ಶುಭಕೋರಿದ ಮೇಘನಾ