ನವದೆಹಲಿ: ಕೊರೊನಾ ವೈರಸ್ ಎಂಬ ಚೀನಿ ಮಾಹಾಮಾರಿ ದೇಶಕ್ಕೆ ಕಾಲಿಟ್ಟ ಬಳಿಕ ಜನ-ಜೀವನ ಅಸ್ತವ್ಯಸ್ತವಾಗಿದೆ. ಕೊರೊನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಹೇರಲಾಗಿತ್ತು. ಇತ್ತ ಶಾಲಾ-ಕಾಲೇಜು ಹಾಗೂ ಕಚೇರಿಗಳನ್ನು ಕೂಡ ಬಂದ್ ಮಾಡಲಾಗಿದ್ದು, ಇನ್ನೂ ತೆರೆಯಲು ಅನುಮತಿ ಸಿಕ್ಕಿಲ್ಲ. ಸದ್ಯ ಆನ್‍ಲೈನ್ ಮೂಲಕ ತರಗತಿಗಳು ನಡೆಯುತ್ತಿವೆ.
Advertisement
ಈ ಆನ್‍ಲೈನ್ ಕ್ಲಾಸ್‍ಗೆ ಹಾಜರಾಗಲು ಅನೇಕ ಮಕ್ಕಳು ಒದ್ದಾಡುತ್ತಿದ್ದಾರೆ. ಇತ್ತ ಶಿಕ್ಷಕರು ಕೂಡ ಮಕ್ಕಳಿಗೆ ಪಾಠ ಹೇಳಿಕೊಡಲು ಹರಸಾಹಸ ಪಡುತ್ತಿದ್ದಾರೆ. ಅಂತೆಯೇ ಇಲ್ಲೊಬ್ಬ ಶಿಕ್ಷಕಿ ಆನ್‍ಲೈನ್ ಕ್ಲಾಸ್ ನಡೆಸಲು ಹೂಡಿರುವ ಐಡಿಯಾವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.
Advertisement
A teacher using a refrigerator tray to teach online. #Teachinghacks #onlineeducation pic.twitter.com/NptsEgiyH6
— Monica Yadav (@yadav_monica) August 8, 2020
Advertisement
ಟ್ವಿಟ್ಟರ್ ಬಳಕೆದಾರೆ ಮೋನಿಕಾ ಯಾದವ್, ಇತ್ತೀಚೆಗೆ ರೆಫ್ರಿಜರೇಟರ್ ಟ್ರೇ ಬಳಸಿ ಶಿಕ್ಷಕಿಯೊಬ್ಬರು ಆನ್ ಲೈನ್ ತರಗತಿ ನಡೆಸುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಆನ್‍ಲೈನ್ ನಲ್ಲಿ ಪಾಠ ಮಾಡಲು ಶಿಕ್ಷಕಿ ಫ್ರಿಡ್ಜ್ ಟ್ರೇ ಬಳಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮನೆಯ ಹಂಚು ಏರಿದ ಬಿಎ ವಿದ್ಯಾರ್ಥಿನಿ
Advertisement
Tough times demands new innovation https://t.co/n5b0RDX3W1
— M Vijay (@mvijayvic) August 10, 2020
ಫೋಟೋದಲ್ಲಿ ಶಿಕ್ಷಕಿ ಪಾರದರ್ಶಕತೆಯಿಂದ ಕೂಡಿರುವ ಫ್ರಿಡ್ಜ್ ಟ್ರೇ ಬಳಸಿಕೊಂಡಿದ್ದಾರೆ. ಎರಡು ಡಬ್ಬಗಳನ್ನು ಇಟ್ಟು ಅದರ ಮೇಲೆ ಟ್ರೇ ಇಟ್ಟಿದ್ದಾರೆ. ಟ್ರೇ ಮೇಲೆ ಮೊಬೈಲ್ ಇಟ್ಟು ಕೆಳಗಡೆ ಇರುವ ಪೇಪರ್ ಗಳನ್ನು ತೋರಿಸಿ ಪಾಠ ಹೇಳಿಕೊಡುತ್ತಿರುವುದನ್ನು ಕಾಣಬಹುದಾಗಿದೆ.
Hats off to you lady it may seem a small thing now that you brought to everybody's attention but that shows your "out of the box thinking"
Superb ????
— sudhir sale (@sudhir_sale) August 11, 2020
ತನಗೆ ಕಷ್ಟ ಆದರೂ ಪರವಾಗಿಲ್ಲ, ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪಾಠ ಹೇಳಿಕೊಡಬೇಕೆಂಬ ಶಿಕ್ಷಕಿಯ ಈ ಪ್ರಯತ್ನಕ್ಕೆ ನೆಟ್ಟಿಗರು ಶಹಬ್ಬಾಸ್ ಅಂದಿದ್ದಾರೆ.
Take a moment to offer your respect to all the teachers who have been quick to adapt to technology. https://t.co/dy8QU0fbRg
— Shweta Baxi Tyagi (@baxishweta) August 10, 2020