ಫಸ್ಟ್ ನೈಟ್ ದಿನ ವಧು ಟೆರೇಸ್ ಹಾರಿ ಎಸ್ಕೇಪ್

Public TV
1 Min Read
Bhopal wedding

ಭೋಪಾಲ್: ಫಸ್ಟ್ ನೈಟ್ ದಿನ ವಧು ಟೆರೇಸ್‍ನಿಂದ ಹಾರಿ ಎಸ್ಕೇಪ್ ಆಗಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಗ್ರಾಮದಲ್ಲಿ ನಡೆದಿದೆ.

ಸೋನು ಜೈನ್ ಎಂಬ ಯುವಕ ಮದುವೆಯಾಗಲು ಹುಡುಗಿ ಸಿಕ್ತಿಲ್ಲ ಎಂದು ಗೋಳಾಡಿದ್ದನು. ಹುಡುಗಿಗಾಗಿ ಹುಡುಕಿ ಸೋತ ಅವನಿಗೆ ಆತನ ಪರಿಚಯದವರೇ ಆದ ಉದಲ್ ಖಾತಿಕ್ ಹುಡುಗಿಯನ್ನು ನಾನು ಹುಡುಕುತ್ತೇನೆ. ಆದರೆ ಅವಳಿಗೆ ನೀನು ಒಂದು ಲಕ್ಷ ರೂಪಾಯಿ ಕೊಡಬೇಕು ಎಂದು ಹೇಳಿದ್ದಾರೆ. ಮದುವೆಯಾಗಲು ಹುಡಗಿ ಹುಡುಕಿ ಸೋತಿದ್ದ ಸೋನು ಇದಕ್ಕೆ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಕರ್ನಾಟಕದಲ್ಲಿ ತಗ್ಗಿತು ಮಳೆ – ಶೀಘ್ರವೇ ದುರ್ಬಲವಾಗಲಿದೆ ಮುಂಗಾರು

Bhopal wedding2

ನಂತರ ಉದಲ್ ತನ್ನಿಬ್ಬರು ಸ್ನೇಹಿತರ ಜೊತೆಗೂಡಿ ಅನಿತಾ ರತ್ನಾಕರ್ ಎಂಬ ಯುವತಿಯನ್ನು ಕರೆತಂದಿದ್ದಾನೆ. ಆಕೆಯ ಚೆಲುವನ್ನು ನೋಡಿ ಸೋನು ಮತ್ತು ಆತನ ಪೋಷಕರು ಮದುವೆಗೆ ಒಪ್ಪಿಕೊಂಡಿದ್ದಾರೆ. ಒಂದು ಲಕ್ಷ ರೂಪಾಯಿಗಳನ್ನೂ ಆಕೆಗೆ ನೀಡಿದ್ದಾರೆ. ಶಾಸ್ತ್ರೋಕ್ತವಾಗಿ ಮದುವೆಯಾಗಿದೆ. ಫಸ್ಟ್ ನೈಟ್‍ಗೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತನಗೆ ಯಾಕೋ ಸುಸ್ತಾಗುತ್ತಿದೆ ಎಂದು ಅನಿತಾ ಟೆರೇಸ್ ಮೇಲೆ ಹೋಗಿದ್ದಾಳೆ. ಎಷ್ಟೂ ಹೊತ್ತಾದರೂ ಆಕೆ ಬರದೇ ಇದ್ದಾಗ ವರ ಹೋಗಿ ನೋಡಿದ್ದಾನೆ. ಆಗ ಆಕೆ ಅಲ್ಲಿ ಇರಲಿಲ್ಲ. ಎಲ್ಲಡೆ ಹುಡುಕಿದರೂ ಸಿಗಲಿಲ್ಲ. ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

wedding

ಅಷ್ಟರಲ್ಲಿ ಓಡಿಹೋಗುತ್ತಿದ್ದ ಅನಿತಾ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ ಆಕೆ ಹಣಕ್ಕಾಗಿ ಈ ರೀತಿ ಮೋಸ ಮಾಡಿರುವುದು ತಿಳಿದುಬಂದಿದೆ. ಈ ವಿಚಾರವಾಗಿ 5 ಮಂದಿಯ ವಿರುದ್ಧ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *