ಫಸ್ಟ್ ನೈಟಿನಲ್ಲೇ ಪತ್ನಿಯನ್ನ ಕೊಂದು ಆತ್ಮಹತ್ಯೆ ಮಾಡ್ಕೊಂಡ ವರ

Public TV
2 Min Read
Untitled 1 copy

– ರೂಮಿನಲ್ಲಿ ಟಿವಿ ಹಾಕ್ಕೊಂಡು ಗಲಾಟೆ
– ವಧು ಕಿರುಚಿದಾಗ ಸಂಬಂಧಿಕರಿಗೆ ಎಚ್ಚರ

ಚೆನ್ನೈ: ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮೊದಲ ರಾತ್ರಿಯೇ ಪತ್ನಿಯನ್ನು ಕೊಂದು ವರ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುವೆಲ್ಲೂರ್ ನಲ್ಲಿ ನಡೆದಿದೆ.

ಸಂಧ್ಯಾ (20) ಕೊಲೆಯಾದ ವಧು. ನೀತಿವಾಸನ್ (24) ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವರ. ಮೃತ ಸಂಧ್ಯಾ ಮತ್ತು ನೀತಿವಾಸನ್ ಇಬ್ಬರು ಸಂಬಂಧಿಗಳಾಗಿದ್ದರು. ದೇಶಾದ್ಯಂತ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದ ಕಾರಣ ಎರಡು ಕುಟುಂಬದ 20 ಮಂದಿಯ ಸಮ್ಮುಖದಲ್ಲಿ ಬುಧವಾರ ಬೆಳಗ್ಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬುಧವಾರ ರಾತ್ರಿಯೇ ನವ ದಂಪತಿಗೆ ಮೊದಲ ರಾತ್ರಿಯನ್ನು ಕುಟುಂಬಸ್ಥರು ಆಯೋಜನೆ ಮಾಡಿದ್ದರು. ಸಂಬಂಧಿಕರು ಮನೆಯ ಹಾಲ್‍ನಲ್ಲಿ ನಿದ್ದೆ ಮಾಡುತ್ತಿದ್ದರು, ದಂಪತಿ ರೂಮಿನಲ್ಲಿದ್ದರು.

marriage 768x447 1

ಸ್ವಲ್ಪ ಸಮಯ ನಂತರ ರೂಮಿನಲ್ಲಿ ಸಂಧ್ಯಾ ಜೋರಾಗಿ ಕೂಗಿಕೊಂಡಿದ್ದಾಳೆ. ತಕ್ಷಣ ಗಾಬರಿಯಿಂದ ಎಚ್ಚರಗೊಂಡ ಸಂಬಂಧಿಕರು ಬಾಗಿಲು ಬಡಿದಿದ್ದಾರೆ. ಆಗ ನೀತಿವಾಸನ್ ಬಾಗಿಲು ತೆರೆದು ಅವರನ್ನು ತಳ್ಳಿ ರೂಮಿನಿಂದ ಓಡಿ ಹೋಗಿದ್ದಾನೆ. ಸಂಬಂಧಿಕರು ರೂಮಿನೊಳಗೆ ಹೋಗಿ ನೋಡಿದ್ದಾರೆ. ಅಲ್ಲಿ ಸಂಧ್ಯಾ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ತಕ್ಷಣ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿ ಸಂಧ್ಯಾಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಸಂಧ್ಯಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

first night

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ವರ ನೀತಿವಾಸನ್‍ಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಗ್ರಾಮಸ್ಥರು ಮರಕ್ಕೆ ಯಾರೋ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದ್ದು, ಅಲ್ಲಿ ವರ ನೀತಿವಾಸನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ROOM

ರೂಮಿನಲ್ಲಿ ದಂಪತಿ ಟಿವಿ ಹಾಕಿ ಜೋರಾಗಿ ಸೌಂಡ್ ಕೊಟ್ಟಿದ್ದರು. ಹೀಗಾಗಿ ಯಾವ ಕಾರಣಕ್ಕೆ ದಂಪತಿ ಜಗಳ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ನೀತಿವಾಸನ್ ಪತ್ನಿಯನ್ನು ಕೊಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

police 1 e1585506284178

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇತ್ತ ಎರಡು ಕುಟುಂಬದವರು ಇಬ್ಬರ ಸಾವಿನಿಂದ ಆಘಾತಕ್ಕೋಳಗಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *