ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ 1 ಲಕ್ಷ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ.
ಒಟ್ಟು 48,658 ಮಂದಿಗೆ ಆಂಟಿಜನ್ ಟೆಸ್ಟ್ 55,690 ಮಂದಿಗೆ ಆರ್‌ಟಿಪಿಸಿಆರ್ ಮತ್ತು ಇತ್ಯಾದಿ ಪರೀಕ್ಷೆ ಸೇರಿದಂತೆ ಒಟ್ಟು 1,04,348 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 55,24,302 ಕೊರೊನಾ ಪರೀಕ್ಷೆ ಮಾಡಲಾಗಿದೆ.
Advertisement
Advertisement
ಇಂದು ರಾಜ್ಯದಲ್ಲಿ 10,947 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 9,832 ಮಂದಿ ಬಿಡುಗಡೆಯಾಗಿದ್ದಾರೆ. 113 ಮಂದಿ ಇಂದು ಕೊರೊನಾಗೆ ಬಲಿಯಾಗಿದ್ದಾರೆ.
Advertisement
ಒಟ್ಟು ಸೋಂಕಿತರ ಸಂಖ್ಯೆ 6,68,652ಕ್ಕೆ ಏರಿಕೆಯಾಗಿದೆ. ಈ ಪೈಕಿ 5,42,906 ಮಂದಿ ಬಿಡುಗಡೆಯಾಗಿದ್ದರೆ 1,16,153 ಸಕ್ರೀಯ ಪ್ರಕರಣಗಳಿವೆ. ಒಟ್ಟು 9,574 ಮಂದಿ ಕೊರೊನಾಗೆ ಬಲಿಯಾಗಿದ್ದು, 841 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
Advertisement
ಎಂದಿನಂತೆ ಬಂಗಳೂರು ನಗರದಲ್ಲಿ 5 ಸಾವಿರ ಮಂದಿಗೆ ಸೋಂಕು ಬಂದಿದೆ. ಉಳಿದಂತೆ ಮೈಸೂರು 979, ಉತ್ತರ ಕನ್ನಡ 462, ಹಾಸನ 471, ದಕ್ಷಿಣ ಕನ್ನಡದಲ್ಲಿ 447 ಮಂದಿಗೆ ಸೋಂಕು ಬಂದಿದೆ. ಬೆಂಗಳೂರು ನಗರದಲ್ಲಿ 303, ಧಾರವಾಡ 93, ಬಳ್ಳಾರಿ 80, ಹಾಸನದಲ್ಲಿ 54 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.