ಹಳದಿ ಹಲ್ಲುಗಳು ಸಾಮಾನ್ಯ ಹಲ್ಲಿನ ಸಮಸ್ಯೆಗಳಲ್ಲಿ ಒಂದಾಗಿದೆ. ಹಳದಿ ಹಲ್ಲುಗಳಿಗೆ ಚಿಕಿತ್ಸೆ ನೀಡಲು ಹಲವಾರು ಪರಿಹಾರಗಳಿದ್ದರೂ, ಅವುಗಳಲ್ಲಿ ಕೆಲವು ನಿಮ್ಮ ವಸಡುಗಳನ್ನು ಹಾನಿಗೊಳಿಸುತ್ತವೆ. ಹೀಗಾಗಿ ನೀವು ರಾಸಾಯನಿಕ ಪ್ರಾಡೆಕ್ಟ್ ಬಳಸದೆ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಿಕೊಂಡು ಪರಿಹಾರ ಕಂಡುಕೊಳ್ಳ ಬಹುದಾಗಿದೆ.
Advertisement
*1 ಟೀಸ್ಪೂನ್ ತೆಂಗಿನೆಣ್ಣೆಯನ್ನು ತೆಗೆದುಕೊಂಡು ನಿಮ್ಮ ಹಲ್ಲಿನ ಮೇಲೆ ಮಸಾಜ್ ಮಾಡಿ. 10 ನಿಮಿಷದ ಬಳಿಕ ನೀರಿನ ಸಹಾಯದಿಂದ ತೊಳೆಯಿರಿ. ಬ್ರಷ್‍ನ ಸಹಾಯದಿಂದ ನಿಮ್ಮ ಹಲ್ಲುಗಳನ್ನು ಉಜ್ಜಿ. ಉತ್ತಮ ಪರಿಹಾರ ಬೇಕೆಂದಲ್ಲಿ ಈ ವಿಧಾನವನ್ನು ಪ್ರತಿನಿತ್ಯ ಮಾಡಿರಿ.
Advertisement
*ಬೇಕಿಂಗ್ ಸೋಡಾವನ್ನು ತೆಗೆದುಕೊಂಡು ಅದನ್ನು ಹನಿ ನೀರು ಹಾಕಿ ಪೇಸ್ಟನ್ನು ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಟೂತ್ ಪೇಸ್ಟ್ ಬಳಸಿ.
Advertisement
Advertisement
*ಬಾಳೆಹಣ್ಣು, ಕಿತ್ತಳೆ ಅಥವಾ ನಿಂಬೆ ಸಿಪ್ಪೆಯನ್ನು ತೆಗೆದುಕೊಂಡು ನಿಮ್ಮ ಹಲ್ಲಿನ ಮೇಲೆ ನಯವಾಗಿ ಸ್ಕ್ರಬ್ ಮಾಡಿ. ನಂತರ ಒಂದು ಅಥವಾ ಎರಡು ನಿಮಿಷ ಬಿಟ್ಟು ನಿಮ್ಮ ಬಾಯಿಯನ್ನು ತೊಳೆಯಿರಿ.
* ಇದ್ದಿಲಿನ ಪುಡಿಯನ್ನು ತೆಗೆದುಕೊಂಡು ಅದನ್ನು ನಿಮ್ಮ ಬ್ರಷ್‍ನ ಸಹಾಯದಿಂದ ಹಲ್ಲುಗಳಿಗೆ ಹಚ್ಚಿದರೆ ಬಿಳಿಯಾದ ಹಲ್ಲು ನಿಮ್ಮದಾಗುತ್ತದೆ.
*ಕಹಿ ಬೇವಿನ ಎಲೆಗಳನ್ನು ಜಜ್ಜಿರಿ, ಇದಕ್ಕೆ ಒಂದು ಅಥವಾ ಎರಡು ಹನಿಗಳಷ್ಟು ಲಿಂಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿಂದ ನಿಮ್ಮ ಹಳದಿ ಹಲ್ಲುಗಳನ್ನು ಉಜ್ಜುವ ಮೂಲಕ ಅದನ್ನು ಬಿಳುಪಾಗಿಸಿರಿ.
* ಎಳ್ಳಿನ ಬೀಜಗಳು ಹಲ್ಲಿನ ಹಳದಿ ಕಲೆ ನಿವಾರಣೆಗೆ ಅತ್ಯುತ್ತಮವಾದುದು. ಎಳ್ಳಿನ ಪುಡಿಯನ್ನು ಬಳಸಿ ಹಲ್ಲುಜ್ಜಿ ಫಳಫಳನೆ ಹೊಳೆಯುವ ಹಲ್ಲು ನಿಮ್ಮದಾಳುತ್ತದೆ.
ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಇತರ ಸಲಹೆಗಳು:
* ನಿಮ್ಮ ಹಲ್ಲಿನ ತಪಾಸಣೆಯನ್ನು ತಪ್ಪಿಸಬೇಡಿ.
* ದಿನಕ್ಕೆ ಎರಡು ಬಾರಿ ಹಲ್ಲುಜ್ಜಿ.
* ಗಟ್ಟಿಯಾದ ಬ್ರಷ್ ಬದಲು, ಮೃದುವಾದ ಬ್ರಷ್ ಬಳಸಿ.
* ಲಂಬವಾಗಿ ಹಲ್ಲುಜ್ಜಿ. ಕೆಲವರು ಅಡ್ಡ ಹಲ್ಲುಜ್ಜುವ ಅಭ್ಯಾಸ ಮಾಡಿಕೊಂಡಿದ್ದಾರೆ.ಇದು ಹಾನಿಗೆ ಕಾರಣವಾಗುತ್ತದೆ.
* ನಿಮ್ಮ ಹಲ್ಲಿಗೆ ಸರಿ ಹೊಂದುವ ಪೇಸ್ಟ್‌ಗಳ ಬಳಕೆಯನ್ನು ಮಾಡಿ