– ಬಿಜೆಪಿ ಕಚೇರಿ ಧ್ವಂಸ, ಅಂಗಡಿಗಳಿಗೆ ಬೆಂಕಿ
ಕೋಲ್ಕತ್ತಾ: ವಿಧಾನಸಭಾ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಹಿಂಸಾಚಾರದ ಕಿಚ್ಚಿಗೆ ಬಿಜೆಪಿ ಕಚೇರಿ ಧ್ವಂಸಗೊಂಡಿದ್ದು, ರಸ್ತೆ ಬದಿಯ ಅಂಗಡಿಗಳು ಬೆಂಕಿಗಾಹಿತಿಯಾಗಿವೆ.
ಇತ್ತ ಮಮತಾ ಬ್ಯಾನರ್ಜಿ ಸ್ಪರ್ಧಿಸಿ ಸೋತಿದ್ದ ನಂದಿಗ್ರಾಮದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಬಿಜೆಪಿ ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸಗೊಳಿಸಲಾಯ್ತು, ಕೆಲವರು ಬೆಂಕಿ ಹಚ್ಚಲು ಮುಂದಾಗಿದ್ದರು ಎಂದು ವರದಿಯಾಗಿದೆ.
ಇದೆಲ್ಲ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಕೆಲಸ. ಕೇವಲ ಬಿಜೆಪಿ ಕಚೇರಿ ಮಾತ್ರ ಧ್ವಂಸಗೊಳಿಸಲ್ಲ. ಇಲ್ಲಿಯ ಹಲವು ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಗಲಾಟೆ ಮಾಡುತ್ತಿದ್ದವರು ಓಡಿ ಹೋದ್ರು ಎಂದು ಬಿಜೆಪಿ ಆರೋಪಿಸಿದೆ. ಈ ಘಟನೆ ಬಳಿಕ ನಂದಿಗ್ರಾಮದಲ್ಲಿ ಉದ್ವಿಗ್ನದ ಪರಿಸ್ಥಿತಿ ನಿರ್ಮಾಣವಾಗಿದೆ.
ಫಲಿತಾಂಶದ ಬಳಿಕ ನಡೆದ ಹಿಂಸಾಚಾರದಲ್ಲಿ ಇದುವರೆಗೂ ನಾಲ್ವರು ಸಾವನ್ನಪ್ಪಿದ್ದಾರೆ. ದಕ್ಷಿಣ 23 ಪರಗಣ, ನದಿಯಾದಲ್ಲಿ ಬಿಜೆಪಿ ಕಾರ್ಯಕರ್ತರು, ವರ್ಧಮಾನ್ ದಲ್ಲಿ ಟಿಎಂಸಿ ಮತ್ತು ಉತ್ತರ 24 ಪರಗಣದಲ್ಲಿ ಐಎಸ್‍ಎಫ್ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ.