– ಪ್ರಿಯತಮೆಯ ನೆನಪಲ್ಲೇ ವಿಷ ಸೇವಿಸಿದ ಯುವಕ
ಹೈದರಾಬಾದ್: ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪ್ರೇಯಸಿ ಸಾವನ್ನಪ್ಪಿದ ಕಾರಣದಿಂದ ಮನನೊಂದ ಯುವಕ ಆಕೆಯ ಸಮಾಧಿಯ ಬಳಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಮಹಾದೇವ್‍ಪುರ ಮಂಡಲದ ಕುದುರುಪಲ್ಲಿ ಎಂಬ ಗ್ರಾಮದಲ್ಲಿ ನಡೆದಿದೆ.
ಮಹೇಶ್ ಆತ್ಮಹತ್ಯೆ ಮಾಡಿಕೊಂಡು ಯುವಕನಾಗಿದ್ದು, ಅದೇ ಗ್ರಾಮದ ಯುವತಿಯನ್ನು ಆತ ಪ್ರೀತಿ ಮಾಡಿದ್ದ. ಆದರೆ ಅನಾರೋಗ್ಯ ಕಾರಣದಿಂದ ಯುವತಿ ಸಾವನ್ನಪ್ಪಿದ್ದಳು. ಅಂದಿನಿಂದ ಆಕೆಯ ನೆನಪುಗಳಲ್ಲೇ ತೀವ್ರವಾಗಿ ಮನನೊಂದಿದ್ದ ಯುವಕ ಸಮಾಧಿಯ ಬಳಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯುವತಿ ಸಾವನ್ನಪ್ಪುವ ಮುನ್ನ ಮನೆಯವರನ್ನು ಮದುವೆಗೆ ಒಪ್ಪಿಸಿದ್ದ ಯುವಕ ಎಲ್ಲರ ಅಂಗೀಕರದೊಂದಿಗೆ ಮದುವೆಯ ಸಿದ್ಧತೆಗಳನ್ನು ಆರಂಭಿಸಿದ್ದ. ಈ ವೇಳೆ ಏಕಾಏಕಿ ಯುವತಿಗೆ ಅನಾರೋಗ್ಯ ಸಮಸ್ಯೆ ಎದುರಾಗಿ ಆಕೆ ಸಾವನ್ನಪ್ಪಿದ್ದಳು. ಯುವಕನನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಆತನ ಆತ್ಮಹತ್ಯೆ ತೀವ್ರ ನೋವನ್ನುಂಟು ಮಾಡಿದೆ.