– ‘ಪ್ರೇಮ’ ಸಂದೇಶಕ್ಕೆ ನೊಂದಿದ್ದ ಯುವತಿ
– ಸ್ವಲ್ಪ ದಿನ ವೇಟ್ ಮಾಡೋಣ ಅಂದ ಗೆಳೆಯ
ಹೈದರಾಬಾದ್: ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನಂದಿಪೇಟ್ ವ್ಯಾಪ್ತಿಯ ಖುವಂದಪುರಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರೇಮ್ ಕುಮಾರ್ (22) ಮತ್ತು ಸುಕನ್ಯ (21) ಆತ್ಮಹತ್ಯೆಗೆ ಶರಣಾದ ಜೋಡಿ. ಅಯ್ಲಿಪುರದ ಪ್ರೇಮ್ ಮತ್ತು ಖುವಂದಪುರದ ಸುಕನ್ಯಾ ಇಬ್ಬರ ನಡುವೆ ಗಿರಿರಾಜ್ ಕಾಲೇಜಿನಲ್ಲಿ ಪದವಿ ಪಡೆಯುರತ್ತಿದ್ದ ವೇಳೆ ಪ್ರೇಮ ಚಿಗುರಿತ್ತು. ಪದವಿ ಬಳಿಕವೂ ಇಬ್ಬರ ಪ್ರೇಮ ಮುಂದುವರಿದಿತ್ತು.
ಕೆಲ ದಿನಗಳಿಂದು ಸುಕನ್ಯ ಮದುವೆ ಕುರಿತು ಮಾತುಕತೆ ನಡೆಸಿ ವರನ ಹುಡುಕುತ್ತಿದ್ದರು. ಪ್ರಿಯಕರ ಪ್ರೇಮ್ ಕುಮಾರ್ ನಿಗೆ ಬೇಗ ತನ್ನನ್ನು ಮದುವೆ ಆಗುವಂತೆ ವಾಟ್ಸಪ್ ಸಂದೇಶ ಕಳುಹಿಸಿದ್ದಳು. ಇತ್ತ ಪ್ರೇಮ್ ಸ್ವಲ್ಪ ದಿನ ವೇಟ್ ಮಾಡೋಣ ಅಂತ ಹೇಳಿ ಸಮಾಧಾನ ಮಾಡಿದ್ದನು.
ಪ್ರೇಮ್ ಸಂದೇಶದಿಂದ ನೊಂದ ಸುಕನ್ಯ ಸೋಮವಾರ ಬೆಳಗ್ಗೆ ಚಾಕುವಿನಿಂದ ಇರಿದುಕೊಂಡು ಸಾವನ್ನಪ್ಪಿದ್ದಾಳೆ. ಇತ್ತ ಸುಕನ್ಯ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಭಯ ಗೊಂಡ ಪ್ರೇಮ್ ಸಹ ಊರ ಹೊರಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಎರಡೂ ಕುಟುಂಬಗಳಲ್ಲಿ ಸೂತಕ ಛಾಯೆ ಆವರಿಸಿದೆ.