ಮುಂಬೈ: ಪತಿ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಪ್ರೇಮಿಗಳದಿನದ ಶುಭಕೋರಿ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರೇಮಿಗಳ ದಿನದಂದು ಪತಿ ಮತ್ತು ಭಾರತದ ನಾಯಕ ವಿರಾಟ್ ಕೊಹ್ಲಿಗೆ ಮುದ್ದಾದ ಪೊಸ್ಟ್‌ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಪ್ರೇಮಿಗಳ ದಿನಕ್ಕೆ ವಿಶ್ ಮಾಡಿದ್ದಾರೆ.
ಈ ದಿನದಂದು ಸೂರ್ಯಾಸ್ತದ ಫೋಟೋಗಳನ್ನು ಪೊಸ್ಟ್ ಮಾಡಲು ಉತ್ತಮ ದಿನವೆಂದು ತೋರುತ್ತಿದೆ. ನನ್ನ ವ್ಯಾಲೆಂಟೈನ್ ಯಾವಾಗಲೂ ಶಾಶ್ವತ ಎಂದು ಬರೆದುಕೊಂಡು ಹೃದಯ ಎಮೋಜಿಯೊಂದಿಗೆ ಫೋಟೋವನ್ನು ಹಂಚಿಕೊಳ್ಳುವ ಮೂಲಕವಾಗಿ ಶುಭ ಕೋರಿದ್ದಾರೆ.
View this post on Instagram
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಮಧ್ಯೆ ಕೊಹ್ಲಿ ಪ್ರಸ್ತುತ ಚೆನ್ನೈನಲ್ಲಿದ್ದಾರೆ. ಉಭಯ ತಂಡಗಳು ಎರಡನೇ ಟೆಸ್ಟ್‍ನ 2 ನೇ ದಿನ ಆಡುತ್ತಿವೆ. ಕಳೆದ ತಿಂಗಳು ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ವಿರಾಟ್ ದಂಪತಿ ಮಗಳಿಗೆ ವಮಿಕಾ ಎಂದು ಹೆಸರು ಇಟ್ಟಿರುವ ಸುದ್ದಿಯನ್ನು ಹಂಚಿಕೊಂಡಿದ್ದರು.