ಪ್ರೇಮಿಗಳ ದಿನದಂದೇ ಹಸೆಮಣೆ ಏರಿದ ಡಿಕೆಶಿ ಪುತ್ರಿ

Public TV
1 Min Read
dk Daughter Marriage1

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಪ್ರೇಮಿಗಳ ದಿನದಂದು ಸಪ್ತಪದಿ ತುಳಿದಿದ್ದಾರೆ.

dk Daughter Marriage7

 

 

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಮೊಮ್ಮಗ ಹಾಗೂ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗ್ಡೆ ಅವರ ಪುತ್ರ  ಅಮರ್ತ್ಯ ಹೆಗ್ಡೆ ಇವತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ವೈಟ್‍ಫೀಲ್ಡ್ ಬಳಿಯ ಖಾಸಗಿ ಹೋಟೆಲಿನಲ್ಲಿ ಐಶ್ವರ್ಯ ಮತ್ತು ಅಮರ್ತ್ಯ ಸುಬ್ರಹ್ಮಣ್ಯ ಹೆಗ್ಡೆ ವಿವಾಹ ನೆರವೇರಿದೆ. ಬೆಳಗ್ಗೆ 9 ರಿಂದ 9-45ರ ನಡುವಿನ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಆಗಿದೆ.

dk Daughter Marriage2 1

 

ಡಿ.ಕೆ ಶಿವಕುಮಾರ್ ಪುತ್ರಿಯ ಮದುವೆ ಸಮಾರಂಭದಲ್ಲಿ ಆಯ್ದ ಗಣ್ಯರು ಹಾಗೂ ಸಂಬಂಧಿಕರಿಗಷ್ಟೇ ಆಹ್ವಾನಿಸಲಾಗಿದೆ. ಅದ್ದೂರಿಯಾಗಿ ಮದುವೆ ನೇರವೇರಿದೆ. ಕನ್ಯಾದಾನದ ವೇಳೆ ಡಿಕೆ ಶಿವಕುಮಾರ್ ಕಣ್ಣೀರು ಇಟ್ಟಿದ್ದಾರೆ. ಡಿ.ಕೆಶಿ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ.

dk Daughter Marriage5

 

ನಿನ್ನ ನಡೆದಿರುವ ಕಾರ್ಯಕ್ರಮದಲ್ಲಿ ‘ಅಪ್ಪಾ ಐ ಲವ್ ಯು’ ಹಾಡಿಗೆ ಮಗಳು ನೃತ್ಯ ಮಾಡುತ್ತಿದ್ದರೆ, ಇತ್ತ ತಂದೆ ಶಿವಕುಮಾರ್ ಮಗಳ ನೃತ್ಯ ನೋಡಿ ಆನಂದಭಾಷ್ಪ ಸುರಿಸುತ್ತಿದ್ದರು. ಮಗಳ ಮದುವೆ ಕಾರ್ಯಕ್ರಮದ ಎಲ್ಲಾ ಸಿದ್ಧತೆಯನ್ನು ಸ್ವತಃ ಡಿಕೆ ಶಿವಕುಮಾರ್ ಮುಂದೆ ನಿಂತು ಮಾಡಿದ್ದಾರೆ ಮದುವೆಗೆ ಸಂಬಂಧಿಕರು ಮತ್ತು ಆತ್ಮೀಯ ಸ್ನೇಹಿತರು ಭಾಗಿಯಗಿದ್ದರು. ಫೇ 17 ರಂದು ನಡೆಯುವ ಆರತಕ್ಷತೆಯಲ್ಲಿ ಹಲವು ಗಣ್ಯಾತೀಗಣ್ಯರು ಮತ್ತು ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ. ಐಶ್ವರ್ಯ ಪ್ರೇಮಿಗಳ ದಿನದಂದು ಅಮರ್ತ್ಯ ಹೆಗ್ಡೆ ಅವರನ್ನು ವರೆಸಿರುವುದು ವಿಶೇಷವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *