-ಯುವತಿ ಆತ್ಮಹತ್ಯೆಗೆ ಯತ್ನ
-ಪ್ರಿಯಕರ, ಮಧ್ಯಸ್ಥಿಕೆಗೆ ಬಂದವನಿಂದ ಕಿರುಕುಳ
ಹುಬ್ಬಳ್ಳಿ: ಪ್ರೇಮ ವೈಫಲ್ಯದಿಂದ ಮನನೊಂದು ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಳೆ ಹುಬ್ಬಳ್ಳಿಯ ಆನಂದನಗರದಲ್ಲಿ ನಡೆದಿದೆ.
ಬಣ್ಣಕ್ಕೆ ಬೆರೆಸುವ ಟಿನ್ನರ್ ಕುಡಿದು ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಯುವತಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿ ಕೆಲವು ವರ್ಷಗಳಿಂದ ತಮ್ಮದೇ ಓಣಿಯ ಮುಜಮ್ಮಿಲ್ ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಮದುವೆಯಾಗಲೂ ನಿರ್ಧರಿಸಿದ್ದರು. ನಂತರ ಇಬ್ಬರ ನಡುವೆ ವೈಮನಸು ಉಂಟಾಗಿ ದೂರವಾಗಿದ್ದರು.
ಈ ವಿಷಯ ತಿಳಿದ ಇಮಾಮ್ ತೊರಗಲ್, ಪ್ರೇಮಿಗಳ ಮದುವೆ ಮಾಡಿಸುವುದಾಗಿ ಮಧ್ಯೆ ಪ್ರವೇಶ ಮಾಡಿದ್ದ. ನಂತರ ಮದುವೆ ಮಾಡಿಸದೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಇವರಿಬ್ಬರ ಕಿರುಕುಳದಿಂದ ಬೇಸತ್ತ ಯುವತಿ ದೈಹಿಕ ಮತ್ತು ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಇದೀಗ ಪ್ರಿಯಕರ ಮುಜಮ್ಮಿಲ್ ಹಾಗೂ ಇಮಾಮ್ ತೊರಗಲ್ ವಿರುದ್ಧ ದೂರುನಿಡಲು ಮುಂದಾಗಿದ್ದಾಳೆ.