ಮೈಸೂರು: ಪ್ರೀತಿಸಿ ಮದುವೆಯಾದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
20 ವರ್ಷದ ಮಂಜುಳಾ ಸಾವನ್ನಪ್ಪಿದ ಮಹಿಳೆ. ಹಳ್ಳಿಕೆರೆಹುಂಡಿಯ ನಿವಾಸಿಯಾಗಿದ್ದ ಮಂಜುಳಾ ಮತ್ತು ಮೆಲ್ಲಹಳ್ಳಿ ಗ್ರಾಮದ ಹೇಮಂತ್ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಪ್ರೀತಿಯ ಸಂಕೇತವಾಗಿ ದಂಪತಿಗೆ ಒಂದು ಮಗುವಿದೆ. ಕೆಲ ದಿನಗಳ ಹಿಂದೆ ಹೇಮಂತ್ ಪತ್ನಿಗೆ ತವರಿನಿಂದ ಹಣ ತರಲು ಹೇಳಿದ್ದನಂತೆ. ಮಂಜುಳಾ ತಂದೆ ಸಹ ಒಂದು ತಿಂಗಳಲ್ಲಿ ಹಣ ನೀಡುವದಾಗಿ ಹೇಳಿದ್ದರು ಎನ್ನಲಾಗಿದೆ. ಆದ್ರೆ ಮಂಜುಳಾ ಮಂಗಳವಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪತಿ ವಿರುದ್ಧ ಪತ್ನಿ ದೂರು – ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಶವ ಪತ್ತೆ
ಸಾವಿನ ಬಗ್ಗೆ ಮಂಜುಳಾ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡದೇ ಹೇಮಂತ್ ಮನೆಯವರು ಅಂತ್ಯಕ್ರಿಯೆಗೆ ಮುಂದಾಗಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು. ಮಗಳ ಸಾವಿನ ಸುದ್ದಿ ತಿಳಿದು ಮಂಜುಳಾ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿ ಅಂತ್ಯಕ್ರಿಯೆ ನಿಲ್ಲಿಸಿದ್ದಾರೆ. ಸದ್ಯ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಮದ್ವೆಯಾಗಿ ಮಗುವಿದ್ರೂ ಲಿವ್ ಇನ್ ರಿಲೇಷನ್‍ಶಿಪ್ – ವೈದ್ಯೆಯನ್ನ ಕೊಲೆ ಮಾಡಿದ್ದ ಪಾರ್ಟ್ನರ್ ಅರೆಸ್ಟ್
ಮಗಳನ್ನು ಕೊಲೆ ಮಾಡಲಾಗಿದೆ ಎಂದು ಮಂಜುಳಾ ಪೋಷಕರು ಆರೋಪಿಸಿದ್ದಾರೆ. ಮಂಜುಳಾ ಪತಿ ಹೇಮಂತ್, ಮಾವ ಪುಟ್ಟಸ್ವಾಮಿ, ಅತ್ತೆ ಭಾಗ್ಯ, ಮೈದುನ ಯಶವಂತ್ ವಿರುದ್ಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಮಂಜುಳಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಇದನ್ನೂ ಓದಿ: ಕ್ಲಿನಿಕ್ ಲ್ಯಾಬ್‍ಗೆ ಕರ್ಕೊಂಡು ಹೋದ – ಡೆಂಟಿಸ್ಟ್‌ಗೆ ಚಾಕು ಇರಿದ ಲಿವ್ ಇನ್ ಪಾರ್ಟ್ನರ್