ಪ್ರೀತಿಯ ಅಪ್ಪು ಇನ್ನಿಲ್ಲ

Public TV
1 Min Read
puneeth rajkumar

ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಡೊಡ್ಡ ಮನೆ ಮಗ ಪುನೀತ್ ರಾಜ್‍ಕುಮಾರ್(46) ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಎಂದಿನಂತೆ ಬೆಳಗ್ಗೆ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದ ಅಪ್ಪು ಬೆಳಗ್ಗೆ 11 ಗಂಟೆ ಸುಮಾರಿಗೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ

ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಪುನಿತ್ ಸ್ಥಿತಿ ಗಂಭೀರವಾಗಿತ್ತು. ಅವರಿಗೆ ಹೃದ್ರೋಗ ತಜ್ಞರು ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಮ್ಮನೆಲ್ಲ ಅಗಲಿದ್ದಾರೆ.

ಪುನೀತ್ ಆರೋಗ್ಯದಲ್ಲಿ ಏರುಪೇರಾಗಿರುವ ವಿಚಾರವನ್ನು ತಿಳಿದ ಸ್ಯಾಂಡಲ್‍ವುಡ್ ಮಂದಿ, ಗಣ್ಯರು, ಅಭಿಮಾನಿಗಳು ಆಸ್ಪತ್ರೆ ಬಳಿ ದೌಡಾಯಿಸಿದ್ದರು. ಸ್ಯಾಂಡಲ್‍ವುಡ್ ಬಳಗೆವೇ ಆಸ್ಪತ್ರೆಗೆ ಬಂದು ಪುನೀತ್ ಅವರ ಆರೋಗ್ಯ ವಿಚಾರವಾಗಿ ಮಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ನಟ ರವಿಚಂದ್ರನ್, ಯಶ್, ರಾಕ್ ಲೈನ್ ವೆಂಟೇಶ್, ಶ್ರೀ ಮುರುಳಿ, ಶ್ರುತಿ, ಶಿವರಾಜ್‍ಕುಮಾರ್ ದಂಪತಿ ಆಸ್ಪತ್ರೆಗೆ ಬಂದಿದ್ದರು.

ಪುನೀತ್, ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಮಗನಾಗಿ 1975 ಮಾರ್ಚ್17 ರಂದು ಜನಿಸಿದರು. ಪುನೀತ್ 1999 ಡಿಸೆಂಬರ್1 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ ದ್ರಿತಿ ಮತ್ತು ವಂದಿತಾ. ಪುನೀತ್ ಮಾಡಿರುವ ಸಿನಿಮಾ ಮತ್ತು ಸಾಮಾಜಿಕ ಕಾರ್ಯಗಳಿಂದ ಅಭಿಮಾನಿಗಳ ಬಳಗವನ್ನು ಸಂಪಾದಿಸಿಕೊಂಡಿದ್ದರು. ಪವರ್ ಸ್ಟಾರ್ ಇನ್ನಿಲ್ಲ ಎನ್ನುವ ಸಂಗತಿ ಅಭಿಮಾನಿಗಳಿಗೆ ಇನ್ನಿಲ್ಲದ ನೋವು ತಂದಿದೆ.

ಭಾರತೀಯ ಚಿತ್ರನಟ, ಹಿನ್ನೆಲೆ ಗಾಯಕ ಮತ್ತು ವಾಹಿನಿಯ ನಿರೂಪಕರಾಗಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಪುನೀತ್ 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ಚಿಕ್ಕ ವಯಸ್ಸಿನಲ್ಲಯೇ ತೆರೆಮೇಲೆ ಬಂದಿದ್ದರು. ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ಆಕಾಶ್, ಅರಸು, ಮಿಲನ, ಜಾಕೀ, ಹುಡುಗರು , ಅಣ್ಣಾ ಬಾಂಡ್ ಮತ್ತು ಪವರ್ ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *