-ಪರಾರಿ ವೇಳೆ ಬೈಕಿನಲ್ಲಿದ್ದ ಪೆಟ್ರೋಲ್ ಖಾಲಿಯಾಗಿ ಸಿಕ್ಕಿ ಬಿದ್ರು
-ಕತ್ತು ಹಿಸುಕಿ ಕೊಲೆಗೈದು, ರೈಲ್ವೇ ಟ್ರ್ಯಾಕ್ ಬಳಿ ಶವ ಎಸೆದ್ರು
ಲಕ್ನೋ: ಪ್ರೀತಿಗೆ ಅಡ್ಡಿಯಾದ ತಂಗಿಯನ್ನ ಇನಿಯನ ಜೊತೆ ಸೇರಿ ಕೊಂದ್ಳು ಪ್ರೀತಿಗೆ ಅಡ್ಡಿಯಾದ 10 ವರ್ಷದ ತಂಗಿಯನ್ನ 15 ವರ್ಷದ ಅಕ್ಕ ತನ್ನ ಪ್ರಿಯತಮನ ಜೊತೆ ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಪ್ರಕರಣ ದಾಖಲಾದ 10 ಗಂಟೆಯಲ್ಲಿಯೇ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗ್ಗೆ ತರಕಾರಿ ತರೋದಾಗಿ ಅಕ್ಕ-ತಂಗಿ ಮನೆಯಿಂದ ಹೊರ ಹೋಗಿದ್ದರು. ಸಂಜೆಯಾದ್ರು ಮನೆಗೆ ಹಿಂದಿರುಗಿದ ಹಿನ್ನೆಲೆ ಬಾಲಕಿಯರ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು ಬಾಲಕಿ ಮತ್ತು ಆಕೆಯ ಪ್ರಿಯಕರ ಪ್ರಮೋದ್ ಕುಮಾರ್ ಬಿಂದ್ ಎಂಬಾತನನ್ನು ಬಂಧಿಸಿದ್ದಾರೆ.
ಗ್ರಾಮದ ಬಾಲಕಿ ಎರಡು ವರ್ಷಗಳಿಂದ ಪ್ರಮೋದ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದ್ರೆ ಇಬ್ಬರ ಪ್ರೇಮ ಪ್ರಸಂಗಕ್ಕೆ ಸೋದರಿ ಅಡ್ಡಿಯಾಗಿದ್ದಳು. ತರಕಾರಿ ತರಲು ಸೈಕಲ್ ಮೇಲೆ ಕರೆದುಕೊಂಡು ಹೋಗುವದಾಗಿ ಹೇಳಿ ತಂಗಿ ಜೊತೆ ಬಂದಿದ್ದಾಳೆ. ಮಾರ್ಗ ಮಧ್ಯೆ ಪ್ರಮೋದ ಜೊತೆಯಾಗಿದ್ದು, ಮೂವರು ಮಿರ್ಜಾಪುರದ ಹೋಟೆಲ್ ನಲ್ಲಿ ಊಟ ಮಾಡಿದ್ದಾರೆ.
ಊಟದ ಬಳಿಕ ರಾಜಪುರ ನಗರದ ಬಳಿ ಕುಳಿತಾಗ ತಂಗಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಅನುಮಾನ ಬಾರದಿರಲಿ ಎಂದು ಶವವನ್ನು ರೈಲ್ವೇ ಟ್ರ್ಯಾಕ್ ಬಳಿ ಬಿಸಾಡಿದ್ದಾರೆ. ಇನ್ನೇನು ಪರಾರಿ ಆಗಬೇಕೆನ್ನುವಷ್ಟರಲ್ಲಿ ಬೈಕಿನಲ್ಲಿದ್ದ ಪೆಟ್ರೋಲ್ ಖಾಲಿಯಾದ ಪರಿಣಾಮ ಮಾರ್ಗ ಮಧ್ಯೆಯ ನಿಂತಿದ್ದಾರೆ. ಇತ್ತ ಕಾರ್ಯಪ್ರವೃತ್ತರಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.