ಹೊಸ ಸ್ಪರ್ಧಿ ಪ್ರಿಯಾಂಕ ಆಟ ಹೇಗೆ ಆಡ್ತಾರೆ ಅನ್ನೋದರ ಬಗ್ಗೆ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ ಮಾತಾಡಿಕೊಳ್ಳುತ್ತಿದ್ದರು. ಈ ವೇಳೆ ಪ್ರಿಯಾಂಕ ಚಾರ್ಮಿಂಗ್ ಗರ್ಲ್ ಹೇಗೆ ಆಡಬೇಕು ಅನ್ನೋದು ಗೊತ್ತಿದೆ ಅಂದ್ರು ಪ್ರಶಾಂತ್ ಸಂಬರಗಿ.
ಮಂಜುಗೆ ಬಿಳಿ ಕೂದಲು ತೆಗೆಯೋದೇನು? ಶಮಂತ್‍ಗೆ ಲವ್ ಪ್ರಪೋಸ್ ಮಾಡದೇನು? ರಘು ತಲೆಗೆ ಎಣ್ಣೆ ಹಚ್ಚೋದೇನು? ಇದೆಲ್ಲ ಪ್ರಿಯಾಂಕಾ ಆರ್ಟಿಪಿಶಿಯಲ್ ಅನ್ನೋದು ಗೊತ್ತಾಗುತ್ತೆ ಅಲ್ಲವಾ ಎಂದು ಚಕ್ರವರ್ತಿ ಚಂದ್ರಚೂಡ ಕೇಳಿದರು. ಚೆನ್ನಾಗಿದೆ, ಮನೆಯಲ್ಲಿ ಎಲ್ಲರೂ ಬೇಕು. ಫಸ್ಟ್ ಡೇ ಬಂದಾಗ ಕೈ ನೋಯ್ತಾ ಇದೆ. ಮಸಾಜ್ ಮಾಡಿ ಅಂದಾಗ ಶಾಕ್ ಆದೆ. ಒಂದು ಕ್ಷಣ ಡಗ್ ಅನ್ನಿಸಿತು ಎಂದು ಸಂಬರಗಿ ಹೇಳಿದರು.
ಮನೆಯಲ್ಲಿ ಯಾರನ್ನ ಹೇಗೆ ಸೆಟ್ ಮಾಡ್ಕೊಬೇಕು ಅನ್ನೋದು ಆ ಹುಡುಗಿಗೆ ತಿಳಿದಿದೆ ಎಂದು ಚಕ್ರವರ್ತಿ ಹೇಳಿದ್ರು. ಇದಕ್ಕೆ ಪ್ರತಿಯಾಗಿ ಅದು ಅವಳ ಗೇಮ್ ಪ್ಲಾನ್ ಮಾಡಿಕೊಳ್ಳಲಿ ಬಿಡು ಎಂದು ಪ್ರಶಾಂತ್ ಸಂಬರಗಿ ಮಾತು ಬದಲಿಸಿದರು.
ಇದೇ ವೇಳೆ ದಿವ್ಯಾ ಸುರೇಶ್ ವಿಚಾರದಲ್ಲಿ ಯಾವುದೋ ಒಂದು ನಿಲುವಿಗೆ ಬದ್ಧವಾಗಿರು. ಬೈದ ಮೇಲೆ ಅವಳನ್ನ ಸಮಾಧಾನ ಮಾಡೋಕೆ ಏನೇನೂ ಕಸರತ್ತು ಮಾಡೋದು ಬೇಕಿರಲ್ಲ. ಬೈದಿದ್ರೆ ಆ ನಿಲುವಿಗೆ ನೀನು ಬದ್ಧ ಆಗಿರಬೇಕು ಎಂದು ಸಂಬರಗಿಗೆ ಚಕ್ರವರ್ತಿ ಸಲಹೆ ನೀಡಿದರು.