ಪ್ರಿಯಕರನ ಜೊತೆ ಸೇರಿ ಪತಿ ಕೊಲೆ ಮಾಡಿಸಿದ್ದ ಲೇಡಿ ಅರೆಸ್ಟ್

Public TV
1 Min Read
Husband Murder KG Halli Bengaluru 4

– ಆಶ್ರಯ ನೀಡಿದ ಗೆಳೆಯನ ಪತ್ನಿ ಜೊತೆ ಕಳ್ಳ ಸಂಬಂಧ

ಬೆಂಗಳೂರು: ಲವ್ವಿ ಡವ್ವಿಗೆ ಪತಿ ಅಡ್ಡಿ ಆಗುತ್ತಿದ್ದಾನೆಂದು ಪ್ರಿಯಕರನಿಗೆ ಹೇಳಿ ಕೊಲೆ ಮಾಡಿಸಿ ನವರಂಗಿ ಆಟವಾಡಿ ಕೈತೊಳೆದುಕೊಳ್ಳಲು ಮುಂದಾಗಿದ್ದ ಐನಾತಿ ಸುಂದರಿಯನ್ನ ಕೆ.ಜಿ ನಗರ ಪೊಲೀಸರು ಬಂಧಿಸಿದ್ದಾರೆ.

Husband Murder KG Halli Bengaluru 3

ರಂಜಿತಾ ಬಂಧಿತ ಆರೋಪಿ. ರಂಜಿತಾ ಐದು ವರ್ಷದ ಹಿಂದೆ ಆಟೋ ಚಾಲಕ ಕಾರ್ತಿಕ್ ಎಂಬತಾನನ್ನು ಪ್ರೀತಿಸಿ ಮದುವೆ ಆಗಿದ್ದಳು. ಇಬ್ಬರ ಮದುವೆಗೆ ಸಾಕ್ಷಿ ಎಂಬಂತೆ ನಾಲ್ಕು ವರ್ಷದ ಹೆಣ್ಣು ಮಗುವಿದೆ. ಕೊಲೆಯಾದ ಕಾರ್ತಿಕ್ ಸ್ನೇಹಿತ ಸಂಜೀವ್ ಗೆ ತನ್ನದೇ ಮನೆಯಲ್ಲಿ ಆಸರೆ ನೀಡಿದ್ದ. ಆರೋಪಿ ಸಂಜೀವ್ ಸ್ನೇಹ ಮರೆತು ಗೆಳೆಯನ ಪತ್ನಿ ರಂಜಿತಾ ಜೊತೆಯಲ್ಲಿ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದನು.

Husband Murder KG Halli Bengaluru 2

ರಂಜಿತಾ ಮತ್ತು ಸಂಜೀವ್ ಪ್ರೀತಿ ಮದುವೆ ಹಂತಕ್ಕೆ ಹೊಗುತ್ತಿದ್ದಂತೆ ಕಾರ್ತಿಕ್ ತಮಗೆ ಅಡ್ಡಿ ಆಗಬಹುದೆಂದು ತಿಳಿದು ಕೊಲೆಗೆ ಸ್ಕೆಚ್ ಹಾಕುತ್ತಾರೆ. ಜುಲೈ 29 ರಂದು ಕಾರ್ತಿಕ್ ನನ್ನ ಆರೋಪಿ ಸಂಜೀವ್, ಸುಬ್ರಮಣ್ಯ ಇಬ್ಬರು ಸೇರಿ ಚನ್ನಪಟ್ಟಣ ಕಡೆ ಕರೆದುಕೊಂಡು ಹೋಗಿದ್ದಾರೆ. ದಾರಿ ಮಧ್ಯೆ ಪಾರ್ಟಿ ಹೆಸರಲ್ಲಿ ಕಾರ್ತಿಕ್‍ಗೆ ಕಂಠ ಪೂರ್ತಿ ಮದ್ಯ ಕುಡಿಸಲಾಗಿದೆ. ಬಳಿಕ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ವೃಷಭವತಿ ನದಿಗೆ ಮೂಟೆ ಕಟ್ಟಿ ಎಸೆದು ಬಂದಿರುತ್ತಾರೆ. ಇದನ್ನೂ ಓದಿ: ಪತಿಯನ್ನು ಖುಷಿಪಡಿಸಲು ಪತ್ನಿಯಿಂದ ನಗ್ನ ಫೋಟೋಶೂಟ್

 Husband Murder KG Halli Bengaluru 1

ಕೊಲೆ ಬಳಿಕ ಪತ್ನಿ ರಂಜಿತಾ ನನ್ನ ಪತಿ ಕಾರ್ತಿಕ್ ಮಿಸ್ಸಿಂಗ್ ಆಗಿದ್ದಾರೆಂದು ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ರಂಜಿತಾಳ ಬಗ್ಗೆ ಅನುಮಾನ ಬಂದು ತನಿಖೆಗೆ ಒಳಪಡಿಸಿದ್ದಾರೆ. ಆಗ ಕೊಲೆಯ ರಹಸ್ಯ ಬಯಲಾಗಿದೆ. ಸದ್ಯ ಘಟನೆ ಸಂಬಂಧ ಕೊಲೆಯಾದ ಕಾರ್ತಿಕ್ ಪತ್ನಿ ರಂಜಿತಾ, ಪ್ರಿಯಕರ ಸಂಜೀವ್, ಸುಬ್ರಮಣ್ಯ ಮೂವರನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ನಗ್ನ ಫೋಟೋ ಹಾಕಿ ಹಾಟ್ ಅವತಾರದಲ್ಲಿ ಮಿಂಚಿದ ಸನ್ನಿ

Share This Article
Leave a Comment

Leave a Reply

Your email address will not be published. Required fields are marked *