ಪ್ರಿಯಕರನೊಂದಿಗೆ ಅಪ್ರಾಪ್ತೆ ಸೆಕ್ಸ್- ನೋಡಿದ್ದಕ್ಕೆ ಸಾಕಿದ್ದ ಅಜ್ಜಿಯನ್ನೇ ಕೊಂದ್ಳು

Public TV
2 Min Read
love 3

– ಪ್ರತಿದಿನ ಊಟದಲ್ಲಿ ನಿದ್ದೆ ಮಾತ್ರೆ ಮಿಕ್ಸ್ ಮಾಡ್ತಿದ್ದ ಹುಡುಗಿ
– ಅಪ್ಪ, ಅಮ್ಮ ಇಲ್ಲದ ಮೊಮ್ಮಗಳನ್ನ ಸಾಕಿದ್ದೆ ತಪ್ಪಾಯ್ತು

ಲಕ್ನೋ: ಅಪ್ರಾಪ್ತ ಹುಡುಗಿ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಸಾಕಿದ್ದ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಜಾನ್ಸಿ ನಗದಲ್ಲಿ ನಡೆದಿದೆ.

ನಿವೃತ್ತ ರೈಲ್ವೆ ನೌಕರರ ಪತ್ನಿ ಮುಮ್ತಾಜ್ (63) ಕೊಲೆಯಾಗಿದ್ದ ವೃದ್ಧೆ. ಪ್ರೇಮ್‍ನಗರ ಪೊಲೀಸ್ ಠಾಣೆ ಪ್ರದೇಶದಲ್ಲಿ ಜೂನ್ 11ರಂದು ಈ ಘಟನೆ ನಡೆದಿತ್ತು. ಈ ಕೊಲೆ ಪ್ರಕರಣವನ್ನು ಇದೀಗ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮೃತ ವೃದ್ಧೆಯ ಅಪ್ರಾಪ್ತ ಮೊಮ್ಮಗಳು ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

the flip side of love

ಏನಿದು ಪ್ರಕರಣ?
ಆರೋಪಿ ಹುಡುಗಿಯ ತಂದೆ ಮೃತಪಟ್ಟಿದ್ದರು. ಇನ್ನೂ ತಾಯಿ ಬೇರೆಯವರ ಜೊತೆ ಓಡಿ ಹೋಗಿದ್ದಳು. ಹೀಗಾಗಿ ಅಪ್ರಾಪ್ತೆ ಅಜ್ಜ-ಅಜ್ಜಿ ಜೊತೆ ವಾಸಿಸುತ್ತಿದ್ದಳು. ಈಕೆ ತರುಣ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಪ್ರತಿದಿನ ರಾತ್ರಿ ಮನೆಯಲ್ಲಿಯೇ ಭೇಟಿಯಾಗುತ್ತಿದ್ದರು. ಅಪ್ರಾಪ್ತೆ ಹುಡುಗಿ ತನ್ನ ಅಜ್ಜ-ಅಜ್ಜಿಗೆ ಊಟದಲ್ಲಿ ನಿದ್ದೆ ಮಾತ್ರ ಹಾಕುತ್ತಿದ್ದಳು. ಅದನ್ನು ತಿಂದು ಇಬ್ಬರು ನಿದ್ದೆ ಮಾಡುತ್ತಿದ್ದರು. ಆಗ ತನ್ನ ಪ್ರಿಯಕರ ತರುಣ್‍ಗೆ ಫೋನ್ ಮಾಡಿ ಮನೆಗೆ ಕರೆಸಿಕೊಳ್ಳುತ್ತಿದ್ದಳು.

ಕೆಲವು ತಿಂಗಳಗಳ ಕಾಲ ಇದೇ ರೀತಿ ಆರೋಪಿಗಳಿಬ್ಬರು ಭೇಟಿ ಮಾಡುತ್ತಿದ್ದರು. ಆರೋಪಿ ತರುಣ್ ನಿದ್ದೆ ಮಾತ್ರೆಗಳನ್ನು ತಂದು ಕೊಟ್ಟಿದ್ದನು ಎಂಬುದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.

room

ಒಂದು ದಿನ ಮುಮ್ತಾಜ್ ಕಡಿಮೆ ಆಹಾರವನ್ನು ಸೇವಿಸಿದ್ದರು. ಹೀಗಾಗಿ ಮುಮ್ತಾಜ್ ಸರಿಯಾಗಿ ನಿದ್ದೆ ಮಾಡಿಲ್ಲ. ಆದರೆ ಎಂದಿನಂತೆ ಮೊಮ್ಮಗಳು ಪ್ರಿಯಕರ ತರುಣ್‍ಗೆ ಫೋನ್ ಮಾಡಿ ಕರೆಸಿಕೊಂಡಿದ್ದಾಳೆ. ನಂತರ ಬೆಡ್ ರೂಮಿನಲ್ಲಿ ಇಬ್ಬರು ಸೆಕ್ಸ್ ಮಾಡುತ್ತಿದ್ದರು. ಅಜ್ಜಿಗೆ ಎಚ್ಚರವಾಗಿ ರೂಮಿಗೆ ಹೋಗಿ ನೋಡಿದ್ದಾರೆ. ಆಗ ಇಬ್ಬರು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ಭಯಗೊಂಡು ಇಬ್ಬರು ಅಜ್ಜಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಇದು ದರೋಡೆ ಸಮಯದಲ್ಲಿ ನಡೆದ ಕೊಲೆ ಎಂದು ನಂಬಿಸುವ ಪ್ರಯತ್ನ ಮಾಡಿದ್ದರು. ಅದರಂತೆಯೇ ಮೃತ ಮುಮ್ತಾಜ್ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೂಡ ತೆಗೆದುಕೊಂಡಿದ್ದರು. ಹೀಗಾಗಿ ದರೋಡೆ ಮಾಡಲು ಬಂದವರು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

Police I

ಪೊಲೀಸರು ವಿಚಾರಣೆ ವೇಳೆ ಮೊಮ್ಮಗಳ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಫೋನ್ ಡಿಟೈಲ್ಸ್ ನೋಡಿದಾಗ ಮುಮ್ತಾಜ್ ಕೊಲೆಯಾದ ದಿನನೇ ಆರೋಪಿ ಪ್ರಿಯಕರ ತರುಣ್‍ಗೆ ಪದೇ ಪದೇ ಮಧ್ಯರಾತ್ರಿ ಫೋನ್ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ವಶಪಡಿಸಿಕೊಂಡು ಪೊಲೀಸರು ವಿಚಾರಣೆ ಮಾಡಿದ್ದಾರೆ. ಈ ವೇಳೆ ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇಬ್ಬರು ಸೆಕ್ಸ್ ಮಾಡುತ್ತಿದ್ದಾಗ ಮೃತ ಮುಮ್ತಾಜ್ ನೋಡಿದ್ದಾರೆ. ಹೀಗಾಗಿ ನಮ್ಮಿಬ್ಬರ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತದೆ ಎಂಬ ಭಯದಿಂದ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ಇಬ್ಬರು ಪರಾರಿಯಾಗಲು ನಿರ್ಧಾರ ಮಾಡಿದ್ದರು. ಆದರೆ ಓಡಿ ಹೋದರೆ ನಾವು ಸಿಕ್ಕಿ ಬೀಳುತ್ತೀವಿ ಎಂದು ಎಸ್ಕೇಪ್ ಆಗಿಲ್ಲ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ಮುಮ್ತಾಜ್ ಮೊಮ್ಮಗಳು ಮತ್ತು ಪ್ರಿಯಕರ ತರುಣ್ ಇಬ್ಬರನ್ನು ಬಂಧಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

arrested 1280x720 2

Share This Article
Leave a Comment

Leave a Reply

Your email address will not be published. Required fields are marked *