ದಾವಣಗೆರೆ: ವಿವಾಹಿತ ಮಹಿಳೆಯೊಬ್ಬರು ಬರ್ಬರವಾಗಿ ಕೊಲೆಯಾದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದ ಗ್ರಾಮದೇವತೆ ದೇವಸ್ಥಾನದ ನರ್ತಕಿ ಬಾರ್ ಬಳಿ ನಡೆದಿದೆ.
ಹರಿಹರದ ನಿವಾಸಿ ರೇಖಾ (25) ಕೊಲೆಯಾದ ವಿವಾಹಿತ ಮಹಿಳೆ. ಕುರುಬರ ಕೇರಿ ನಿವಾಸಿಯಾದ ರೇಖಾಳನ್ನು ಅನೈತಿಕ ಸಂಬಂಧದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಿಯಕರ ಚೇತನ್ ಚಾಕು ಇರಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದ್ದು, ಸದ್ಯ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೇಖಾಳಿಗೆ ಈಗಾಗಲೇ ನಾಗರಾಜ್ ಎಂಬಾತನ ಜೊತೆ ವಿವಾಹವಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ. ಸ್ಥಳಕ್ಕೆ ಎಸ್ ಪಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹರಿಹರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.