ಪ್ರಾಪರ್ಟಿ ವಿಚಾರ ಗೊತ್ತಿಲ್ಲ, ಹಲ್ಲೆಗೊಳಗಾದವನಿಗೆ ಪರಿಹಾರ ಕೊಡ್ಬೇಕು: ಇಂದ್ರಜಿತ್

Public TV
2 Min Read
indrajeeth lankesh

ಬೆಂಗಳೂರು: ಪ್ರಾಪರ್ಟಿ ವಿಚಾರವಾಗಿ ನನಗೆ ಏನೂ ಗೊತ್ತಿಲ್ಲ. ಒಬ್ಬ ಏಟು ತಿಂದಿದ್ದಾನೆ ಅವನು ನೋವಿನಲ್ಲಿ ಇದ್ದಾನೆ. ಅವನ ಬಳಿ ಕ್ಷಮೆ ಕೇಳಿದರೆ ದರ್ಶನ್ ದೊಡ್ಡವರಾಗುತ್ತಿದ್ದರು. ಒಬ್ಬ ಸಾಮಾನ್ಯನಾದವನಿಗೆ ಹೊಡೆದು ನಾನು ಕ್ಷಮೆ ಕೇಳಲ್ಲ ಎನ್ನುತ್ತಿದ್ದಾರೆ. ಆ ವ್ಯಕ್ತಿ ಜೊತೆಗೆ ಕ್ಷಮೆ ಕೇಳಿ, ಆತನಿಗೆ ಸಹಾಯ ಮಾಡಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪಟ್ಟು ಹಿಡಿದಿದ್ದಾರೆ.

DARSHAN 2 3 medium

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಮಾತನಾಡಿರುವ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಈ ರೀತಿ ಭಾಷೆಗಳನ್ನು ಸಾಕಷ್ಟು ಬಾರಿ ನಾನು ಕೇಳಿದ್ದೇನೆ. ಒಂದು ಸಂಸ್ಕøತಿ, ಸಂಸ್ಕಾರ ಇರುವವರು ಈ ರೀತಿ ಮಾತನಾಡುವುದಿಲ್ಲ. 25 ಕೋಟಿ ಹಗರಣದಲ್ಲಿ ಬಂದಂತಹ ಅರುಣಾ ಕುಮಾರಿಯನ್ನು ಯಾಕೆ ದರ್ಶನ್ ಅವರು ಮನೆಗೆ ಕರೆಸಿಕೊಂಡರು? ನಿಮಗೆ ಗೊತ್ತೆ ಇಲ್ಲ ಅಂದ್ರಲ್ಲ. ಯಾಕೆ ಕರೆಸಿಕೊಂಡಿದ್ದು? ಯಾವುದೇ ಒಬ್ಬ ನಟನ ಬಾಯಲ್ಲಿ ತಲೆ ಕತ್ತರಿಸುತ್ತೇನೆ. ತಲೆ ತೆಗಿತೀನಿ ಎನ್ನುವ ಮಾತು ಬರಬಾರದು ಎಂದು ಕಿಡಿಕಾರಿದರು. ಇದನ್ನೂ ಓದಿ: ಇಂದೇ ಸ್ಟಿಂಗ್ ಆಪರೇಷನ್ ಮಾಡಿದರೂ ನಾನು ಹೆದರಲ್ಲ: ದರ್ಶನ್

ನಾನು ತನಿಖಾ ತಂಡದೊಂದಿಗೆ ದರ್ಶನ್ ಅವರು ಮಾತನಾಡಿರುವ ಬಗ್ಗೆ ಮಾತನಾಡುತ್ತೇನೆ. ನಮ್ಮ ಚರ್ಚೆಯ ಬಗ್ಗೆ ನಾನು ತನಿಖಾ ತಂಡದೊಂದಿಗೆ ಚರ್ಚೆ ಮಾಡುತ್ತೇನೆ. ನನ್ನೊಂದಿಗೆ ಇರುವ ದಾಖಲೆಯನ್ನು ತನಿಖಾ ತಂಡದ ಮುಂದೆ ಇಡುತ್ತೇನೆ. ನಾನು ಯಾಕೆ ದರ್ಶನ್ ಮುಂದೆ ಇಡಬೇಕು? 6 ಕೋಟಿ ಕನ್ನಡಿಗರ ಮುಂದೆ ಯಾರು ಸರಿ, ಯಾರು ತಪ್ಪು ಎಂಬುದು ಮುಂದೆ ಗೊತ್ತಾಗಲಿದೆ. ಅದು ಅಷ್ಟೆ ಅಲ್ಲ. ಆ ಅನ್ಯಾಯವಾದ ವ್ಯಕ್ತಿಗೆ ಒಂದು ಪರಿಹಾರ ಸಿಗಬೇಕಿದೆ ಎಂದರು.

INDRAJEETH 4 1 medium

ಹೋಟೆಲಿನಲ್ಲಿ ನೀವು ಬಡವ ಸಪ್ಲೇಯರ್ ಗೆ ಹೊಡೆದ್ರೋ ಇಲ್ಲವೋ..?, ಅಂದು ನೀವು ಯಾರ ಜೊತೆಗಿದ್ರಿ..?, 25 ಕೋಟಿ ಡೀಲ್ ವಿಚಾರ ಸಂಬಂಧ ನೀವು ಅರುಣಾ ಕುಮಾರಿಯನ್ನು ಯಾಕೆ ತೋಟಕ್ಕೆ ಕರೆದ್ರಿ..?. ಮೊದಲು ನನ್ನ ಈ ಪ್ರಶ್ನೆಗಳಿಗೆ ಉತ್ತರ ನೀಡಿ. ಅಲ್ಲದೆ ಬಡವನಿಗೆ ಹೊಡೆದಿಲ್ಲ ಅಂದ್ರೆ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿ ಎಂದು ಚಾಲೆಂಜ್ ಹಾಕಿದ್ರು.

DARSHAN 5 medium

ದರ್ಶನ್ ವಿಚಲಿತರಾಗಿದ್ದಾರೆ. ಅವರು ಈ ಸಂದರ್ಭದಲ್ಲಿ ವಿಚಲಿತರಾಗಬೇಕಾಗಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಸಾಕು. ಅವರು ಇಂದು ಬಳಸಿರುವ ಭಾಷೆ ಅವರ ಹಿನ್ನೆಲೆ ತೋರಿಸುತ್ತದೆ. ನಾನು ಅವರನ್ನು ಅನ್ ಎಜುಕೇಟೆಡ್ ಅಂತ ಹೇಳಿಲ್ಲ. ರಾಜ್ ಕುಮಾರ್ ನಡೆದು ಬಂದ ದಾರಿ, ಭಾಷೆ, ಸಿನಿಮಾ, ನಟನೆಯ ಬಗ್ಗೆ ಇರುವ ಕಾಳಜಿ ಇಡೀ ದೇಶಕ್ಕೆ ಗೊತ್ತಿದೆ ಎಂದರು. ಇದನ್ನೂ ಓದಿ: ದರ್ಶನ್ ವಿಚಲಿತರಾಗಿದ್ದಾರೆ, ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲಿ: ಇಂದ್ರಜಿತ್

ಡಿಸ್ಟರ್ಬ್ ಆಗಿದ್ರೆ ಟ್ರೀಟ್ಮೆಂಟ್ ತಗೋಳಿ ದರ್ಶನ್ ಅವರೇ. ಆಡಿಯೋ, ವೀಡಿಯೋ ಸಾಕ್ಷ್ಯಗಳನ್ನು ಪೊಲೀಸರ ಮುಂದೆ ತೋರಿಸುತ್ತೇವೆ. ಇವರ ಮುಂದಿಡುವ ಅವಶ್ಯಕತೆ ಇಲ್ಲ. ಮಹಿಳೆಗೆ ಬೆದರಿಕೆ ಹಾಗೂ ಸಪ್ಲೇಯರ್ ಗೆ ಹೊಡೆದಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು ಎಂದಾಗ ಇಷ್ಟೊಂದು ವಿಚಾರಗಳು ಹೊರ ಬಂದಿದೆ. ಇನ್ನೂ ಕೂಡ ಎಷ್ಟೊಂದು ವಿಚಾರಗಳು ಹೊರ ಬರುತ್ತವೆ ಎಂದು ದರ್ಶನ್ ಈಗಾಗಲೇ ವಿಚಲಿತರಾಗಿ ಮಾತನಾಡಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *