ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಮೊದಲಿನಿಂದಲೂ ಪ್ರಾಣಿಗಳ ಮೇಲೆ ಒಲವಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂದು ವಿಶ್ವ ವನ್ಯಜೀವಿ ದಿನದ ಅಂಗವಾಗಿ ಡಿ-ಬಾಸ್ ಕೆಲವೊಂದು ಪ್ರಾಣಿಗಳ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
ಮೊದಲಿನಿಂದಲೂ ನಟ ದರ್ಶನ್‍ಗೆ ಪ್ರಾಣಿಗಳೆಂದರೆ ಅಚ್ಚು-ಮೆಚ್ಚು. ಪ್ರಾಣಿಗಳೊಂದಿಗೆ ಅಪರೂಪದ ಭಾಂದವ್ಯ ಹೊಂದಿರುವ ದರ್ಶನ್ ಮೈಸೂರು ಮೃಗಾಲಯದಲ್ಲಿ ಹಲವಾರು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಅಲ್ಲದೆ ಸಿನಿಮಾದ ಶೂಟಿಂಗ್ ಮಧ್ಯೆ ಆಗಾಗ ಬಿಡುವು ಮಾಡಿಕೊಂಡು ಸಫಾರಿಗೆ ಹೋಗಿ ಪ್ರಾಣಿಗಳ ಫೋಟೋಗಳನ್ನು ಬಹಳ ಹತ್ತಿರದಿಂದ ತಮ್ಮ ಕೈಯಾರೇ ಕ್ಯಾಮೆರಾದಿಂದ ಸೆರೆಹಿಡಿಯುತ್ತಾರೆ.
ಸದ್ಯ ಮಾರ್ಚ್ 3ರಂದು ವಿಶ್ವ ವನ್ಯಜೀವಿ ದಿನದ ಅಂಗವಾಗಿ ದರ್ಶನ್ ತಾವೇ ತಮ್ಮ ಕೈಯಾರೇ ಕ್ಲಿಕ್ಕಿಸಿರುವ ಹುಲಿ, ಆನೆ, ಚಿರತೆ ಹಾಗೂ ವಿವಿಧ ಪ್ರಭೇದದ ಪಕ್ಷಿಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ. ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ, ನಿಮಗೆ ಕಾಳಜಿಯನ್ನು ತೋರಿಸುತ್ತದೆ, ಅಪರಿಚಿತರಾಗಬೇಡಿ. ಪ್ರಾಣಿಗಳನ್ನು ಉಳಿಸಿ ಏಕೆಂದರೆ ಅವು ಈ ಪ್ರಪಂಚದ ಒಂದು ಭಾಗವಾಗಿದೆ. ವನ್ಯಜೀವಿಗಾಗಿ ನಿಲ್ಲುವ ಸಮಯ. ನಿಮ್ಮ ದಾಸ ದರ್ಶನ್ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
ದರ್ಶನ್‍ಗೆ ಪ್ರಾಣಿಗಳ ಮೇಲೆ ಕ್ರೇಜ್ ಎಷ್ಟಿದೆ ಎಂಬುವುದಕ್ಕೆ ಮತ್ತೊಂದು ಸಾಕ್ಷಿ ಡಿ-ಬಾಸ್ ತಮ್ಮ ಫಾರ್ಮ್ ಹೌಸ್‍ನಲ್ಲಿ ಹಲವು ಪ್ರಾಣಿ ಮತ್ತು ಪಕ್ಷಿಗಳನ್ನು ಸಾಕಿದ್ದಾರೆ. ಅಲ್ಲದೆ ಕುದುರೆ ಸವಾರಿ ಎಂದರೆ ದರ್ಶನ್‍ಗೆ ಬಹಳ ಇಷ್ಟ. ಬೃಂದಾವನ, ಯಜಮಾನ, ಅಂಬರೀಶ ಹೀಗೆ ಹಲವು ಸಿನಿಮಾಗಳಲ್ಲಿ ಕೂಡ ದರ್ಶನ್ ಪ್ರಾಣಿಗಳೊಂದಿಗೆ ಕಾಣಿಸಿಕೊಂಡಿದ್ದಾರೆ.
View this post on Instagram